ಮುಸ್ಲಿಂ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಕಂಡು ಕೇಳರಿಯದ ಮಳೆ: ಪ್ರವಾಹಕ್ಕೆ ಕೊಚ್ಚಿ ಹೋದ ಕಾರುಗಳು

ಸೌದಿ ಅರೇಬಿಯಾದ ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮೆಕ್ಕಾ ಮತ್ತು ಮದೀನಾದಲ್ಲಿ ಸೋಮವಾರ ಅಕಾಲಿಕ ಮಳೆ ಸುರಿದ ಪರಿಣಾಮ ಪ್ರವಾಹದ ವಾತಾವರಣ ಸೃಷ್ಟಿಯಾಗಿ ಪವಿತ್ರ ಸ್ಥಳಕ್ಕೆ ಬಂದ ಭಕ್ತರು ಪರದಾಡಿದ್ದಾರೆ.

First Published Jan 8, 2025, 1:01 PM IST | Last Updated Jan 8, 2025, 1:01 PM IST

ಮರಳುಗಾಡಿನಲ್ಲಿ ಕಾಣಿಸಿಕೊಂಡಿದೆ ರಣಭೀಕರ ಮಳೆ.. ಪವಿತ್ರ ನೆಲದಲ್ಲಿ ವಿಜೃಂಭಿಸ್ತಾ ಇದೆ ಪ್ರಚಂಡ ಪ್ರವಾಹ.. ಕಾರುಗಳು ಕೊಚ್ಚಿ ಹೋದವು.. ಮನೆಗಳು ಮುಳುಗಿದ್ವು..  ಬಿಸಿಲಿನ ಅಬ್ಬರಕ್ಕೆ ತತ್ತರಿಸಿದ ದೇಶದಲ್ಲಿ, ಈಗ ವರುಣನ ಪ್ರಹಾರ.. ಇನ್ನೊಂದು ಕಡೆ, ಗಡಗಡ ನಡುಗಿದ ಭೂಮಿ, ನೂರಾರು ಜನರ ಪ್ರಾಣವನ್ನೇ ನುಂಗಿಕೊಂಡಿದೆ… ಭಾರತಕ್ಕೂ ಭಯ ಹುಟ್ಟಿಸಿದೆ.. ಆ ಭಯಾನಕ ದೃಶ್ಯಗಳನ್ನ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್.. ಮೆಕ್ಕಾದಲ್ಲಿ  ಮಹಾ ಪ್ರಳಯ