ರಿಷಿ ಸುನಕ್‌ ಸೋಲಿಗೆ ಕಾರಣವಾಗಿದ್ದು 5 ಆಪಾದನೆಗಳು!

ಬ್ರಿಟನ್‌ ಪ್ರಧಾನಮಂತ್ರಿಯಾಗುವ ಮೊದಲ ಭಾರತೀಯ ಎನಿಸಿಕೊಳ್ಳುವ ಹಾದಿಯಲ್ಲಿದ್ದ ರಿಷಿ ಸುನಕ್‌ ಕೊನೆಗೂ ಸೋಲು ಕಂಡಿದ್ದಾರೆ. ಆರಂಭದಲ್ಲಿ ಪ್ರಧಾನಿ ಪಟ್ಟದ ಫೇವರಿಟ್‌ ಆಗಿದ್ದ ರಿಷಿ ಸುನಕ್‌, ಕೊನೆಯ ಹಂತದಲ್ಲಿ ಎದುರಾಳಿಯಾಗಿದ್ದ ಮಹಿಳಾ ಸ್ಪರ್ಧಿ ಲಿಜ್‌ ಟ್ರಸ್‌ ಎದುರು ಸೋಲು ಕಂಡಿದ್ದರು. ಆದರೆ, ಅವರ ಸೋಲಿಗೆ ಕಾರಣವೇನು?
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.6): ಬ್ರಿಟನ್‌ನ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನಿಸಿಕೊಳ್ಳುವ ರಿಷಿ ಸುನಕ್‌ ಆಸೆ ಭಗ್ನಗೊಂಡಿದೆ. ಎದುರಾಳಿ ಲಿಜ್‌ ಟ್ರಸ್‌ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆರಂಭದಲ್ಲಿ ಪ್ರಧಾನಿಯಾಗುವ ರೇಸ್‌ನಲ್ಲಿ ಭರ್ಜರಿ ಅಂತರ ಕಾಯ್ದುಕೊಂಡಿದ್ದ ರಿಷಿ ಸುನಕ್‌ಗೆ ಕೊನೇ ಹಂತದಲ್ಲಿ ಅವರ ಮೇಲಿದ್ದ ಆಪಾದನೆಗಳು ಶತ್ರುವಾಗಿದೆ.

ಲಿಜ್‌ ಟ್ರಸ್‌ ಬ್ರಿಟನ್‌ನ ಪ್ರಧಾನಿ ಪಟ್ಟ ಅಲಂಕರಿಸಿದ ಮೂರನೇ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ, ಇದೆಲ್ಲದಕ್ಕೂ ಕಾರಣವಾಗಿದ್ದ ಬೊರಿಸ್‌ ಜಾನ್ಸನ್‌ ಸರ್ಕಾರವಿದ್ದ ವೇಳೆ ಬಂಡಾಯವೆದ್ದು ಸ್ವತಃ ರಿಸಿ ಸುನಕ್‌ ನೀಡಿದ್ದ ಮೊದಲ ರಾಜೀನಾಮೆ. ಆದರೆ, ಪ್ರಧಾನಿಯಾಗುವ ಹಂಬಲದಲ್ಲಿದ್ದ ರಿಷಿಗೆ ನಿರಾಸೆಯಾಗಿದ್ದು ಅವರ ಮೇಲಿದ್ದ ಐದು ಆಪಾದನೆಗಳು

UK New PM ರಿಷಿ ಸುನಕ್ ಹಿಂದಿಕ್ಕಿ ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ!

ಬಹುಶಃ ರಿಷಿ ಮೇಲೆ ಈ ಆಪದಾದನೆಗಳು ಇರದೇ ಹೋಗಿದ್ದರೆ, ಬ್ರಿಟನ್‌ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳಿದ್ದವು. ತಿಂಗಳುಗಟ್ಟಲೆ ನಡೆದ ಬ್ರಿಟನ್ ಪ್ರಧಾನಿ ಪ್ರಹಸನ ಕಡೆಗೂ ಮುಗಿದಿದೆ.. ಅಬ್ಬರ ಪ್ರಚಾರ ಒಂದು ಕಡೆ.. ನಿಲ್ಲದ ಕುತೂಹಲ ಕಡೆ.. ಈ ಎರಡರ ಮಧ್ಯೆ, ಯುಕೆ ಹೊಸ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಿಕೊಂಡಿದೆ.

Related Video