Asianet Suvarna News Asianet Suvarna News

UK New PM ರಿಷಿ ಸುನಕ್ ಹಿಂದಿಕ್ಕಿ ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ!

ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಈ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

UK Prime Minister Election Result Liz Truss Elected as new pm of Britain beats Rishi Sunak ckm
Author
First Published Sep 5, 2022, 5:17 PM IST

ಬ್ರಿಟನ್(ಸೆ.05):  ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಬೊರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೇರಲು ಕನ್ಸರ್ವೇಟಿವ್ ಪಕ್ಷದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಪ್ರಮುಖವಾಗಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಹಾಗೂ ಲಿಜ್ ಟ್ರಸ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಅಂತಿಮವಾಗಿ ಲಿಜ್ ಟ್ರಸ್ ಅತೀ ಹೆಚ್ಚಿನ ಮತಗಳ ಮೂಲಕ ಕನ್ಸರ್ವೇಟೀವ್ ಪಾಕ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಲಿಜ್ ಟ್ರಸ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.  ಬ್ರಿಟನ್ ಪ್ರಧಾನಿ ಯಾರಾಗಬೇಕು ಎಂದು ಕಳೆದ ಒಂದು ತಿಂಗಳಿನಿಂದ ಮತದಾನ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಲಿಜ್ ಟ್ರಸ್ 82 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರೆ, ರಿಷಿ ಸುನಕ್ 62 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಲಿಜ್ ಟ್ರಸ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. 

ಜುಲೈ ತಿಂಗಳಲ್ಲಿ ಬ್ರಿಟನ್ ಪ್ರಧಾನಿ(Britain PM) ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲೇ ಜಾನ್ಸನ್(boris johnson) ಪ್ರಧಾನಿಯಾಗಿ ಮುಂದುವರಿಯಲು ಭಾರಿ ಅಸಮಾಧಾನ ಎದ್ದಿತ್ತು. ಇದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದರು. ಬಳಿಕ ಕನ್ಸರ್ವೇಟೀವ್ ಪಕ್ಷ(conservative party) ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದೆ. ಇದರ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ ಎಂದಿದ್ದರು. ಇದರಿಂದ ಬ್ರಿಟಿನ್ ಪ್ರಧಾನಿ ಆಯ್ಕೆ ರೇಸ್ ಆರಂಭಗೊಂಡಿತ್ತು. ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್(Rishi Sunak) ಆರಂಭಿಕ ಹಂತದಲ್ಲಿ ಭಾರಿ ಮುನ್ನಡೆ ಕಾಯ್ದಕೊಳ್ಳುವ ಮೂಲಕ ಮುಂದಿನ ಬ್ರಿಟನ್ ಪ್ರಧಾನಿ ಎಂದೇ ಗುರುತಿಸಿಕೊಂಡಿದ್ದರು. ಆದರೆ ಅಂತಿಮ ಘಟ್ಟ ತಲುಪುತ್ತಿದ್ದಂತೆ ಲಿಜ್ ಟ್ರಸ್(Liz Truss) ಪ್ರಬಲ ನಾಯಕಿ ಗುರುತಿಸಿಕೊಂಡಿದ್ದರು. ರಿಷಿ ಸುನಕ್ ಮತಗಳ ಸಂಖ್ಯೆ ಕಡಿಮೆಯಾಗ ತೊಡಗಿತ್ತು.

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ಬ್ರಿಟನ್ ಪ್ರಧಾನಿ(UK Prime minister) ಯಾರಾಗಬೇಕು ಅನ್ನೋ ಚುನಾವಣೆಯಲ್ಲಿ ಶೇಕಡಾ 82.7 ರಷ್ಟು ಮತದಾನವಾಗಿದೆ. ಇದರಲ್ಲಿ 655 ಮತಗಳು ತಿರಸ್ಕೃತಗೊಂಡಿದೆ. ರಿಷಿ ಸುನಕ 60,399 ಮತಗಳನ್ನು ಪಡೆದರೆ, ಲಿಜ್ ಟ್ರಸ್ 81,326 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಲಿಜ್ ಟ್ರಸ್ ಕನ್ಸರ್ವೇಟೀವ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸರಿಸುಮಾರು 20 ಸಾವಿರ ಮತಗಳ ಅಂತರದಿಂದ ರಿಷಿ ಸುನಕ್ ಹಿಂದಿಕ್ಕಿ ಲಿಜ್ ಟ್ರಸ್ ಕನ್ಸರ್ವೇಟೀವ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಲಿಜ್ ಟ್ರಸ್ ಶೀಘ್ರದಲ್ಲೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ಲಿಜ್ ಟ್ರಸ್, ತೀವ್ರ ಸ್ಪರ್ಧೆ ಒಡ್ಡಿದ ರಿಷಿ ಸುನಕ್ ಅಭಿನಂದಿಸಿದ್ದಾರೆ. ಕನ್ಸರ್ವೇಟೀವ್ ಪಕ್ಷದಲ್ಲಿನ ಪ್ರಜಾಪ್ರಭುತ್ವದಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ರಿಷಿ ಸುನಕ್ ತೀವ್ರ ಸ್ಪರ್ಧೆ ನೀಡಿದ್ದರು. ಇದೀಗ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದೇನೆ. ಚುನಾವಣೆ ಮೂಲಕ ಕನ್ಸರ್ವೇಟೀವ್ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಲಿಜ್ ಟ್ರಸ್ ಹೇಳಿದ್ದಾರೆ. ಇದೇ ವೇಳೆ ಸುಗಮ ಆಡಳಿತ ನೀಡುತ್ತೇನೆ ಭರವಸೆ ನೀಡಿದ್ದಾರೆ. ಬ್ರಿಟನ್ ಆರ್ಥಿಕತೆಯನ್ನು ಮೇಲಕ್ಕೆತ್ತುವುದು, ಪ್ರಮುಖವಾಗಿ ಬ್ರಿಟನ್ ಎದುರಿಸುತ್ತಿರುವ ಆರೋಗ್ಯ ತುರ್ತು ಸಮಸ್ಯೆ ಸೇರಿದಂತೆ ಹಲವು ಸವಾಲುಗಳು ನಮ್ಮ ಮುಂದಿದೆ. ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಲಿಜ್ ಟ್ರಸ್ ಹೇಳಿದ್ದಾರೆ. 

40 ಡಿ.ಸೆ ಉಷ್ಣಾಂಶಕ್ಕೆ ತತ್ತರಿಸಿದ ಬ್ರಿಟನ್‌: 13 ಮಂದಿ ಸಾವು

Follow Us:
Download App:
  • android
  • ios