
ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆ ನೋಡೋದೆ ರೋಮಾಂಚನ: ರವಿ ಹೆಗಡೆ
ಲಂಡನ್ ಥೇಮ್ಸ್ ನದಿಯ ದಂಡೆ ಮೇಲಿರುವ ಬಸವಣ್ಣನವವರ ಕಂಪು ಕಂಚಿನ ಪುತ್ಥಳಿಯನ್ನ 2015 ನವೆಂಬರ್ 14 ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಅದಾನ ನಂತರ ಥೇಮ್ಸ್ ನದಿಯ ಈ ದಂಡೆ ಪ್ರವಾಸಿ ತಾಣವಾಗಿ ಇತಿಹಾಸದ ಕುರುಹು ಆಗಿ ಭಕ್ತಿಯ ಸೆಲೆಯಾಗಿ ಮಾರ್ಪಟ್ಟಿದೆ.
ಲಂಡನ್(ಜ.18): 2015 ನವೆಂಬರ್ 14 ರ ನಂತರ ಯಾರೇ ಭಾರತೀಯರು ಲಂಡನ್‌ಗೆ ಭೇಟಿ ಕೊಟ್ರೆ ಈ ಸ್ಥಳಕ್ಕೆ ಬಂದೇ ಬರುತ್ತಾರೆ. ಕಂಪು ಕಂಚಿನಲ್ಲಿ ಅರಳಿ ನಿಂತಿರುವ ಸಮಾಜ ಸುಧಾರಕ, ವಚನ ಚಳುವಳಿ ನೇತಾರ ಶ್ರೀ ಬಸವಣ್ಣನವರ ಪುತ್ಥಳಿ ಇರುವ ಜಾಗ ಇದು. ಲಂಡನ್ ಥೇಮ್ಸ್ ನದಿಯ ದಂಡೆ ಮೇಲಿರುವ ಕಂಪು ಕಂಚಿನ ಪುತ್ಥಳಿಯನ್ನ 2015 ನವೆಂಬರ್ 14 ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಅದಾನ ನಂತರ ಥೇಮ್ಸ್ ನದಿಯ ಈ ದಂಡೆ ಪ್ರವಾಸಿ ತಾಣವಾಗಿ ಇತಿಹಾಸದ ಕುರುಹು ಆಗಿ ಭಕ್ತಿಯ ಸೆಲೆಯಾಗಿ ಮಾರ್ಪಟ್ಟಿದೆ. ಬ್ರಿಟಿಷ್ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯಿಂದ ಅನಾವರಣಗೊಂಡ ಮೊಟ್ಟ ಮೊದಲ ಭಾರತದ ಪ್ರತಿಮೆ ಇದಾಗಿದೆ. ಈ ಕಾರಣಕ್ಕೆ ಇದು ಇನ್ನು ಕೆಲವೇ ದಿನಗಳಲ್ಲಿ ಗಿನ್ನಿಸ್ ದಾಖಲೆ ಸೇರೋದಕ್ಕೆ ಸಜ್ಜಾಗಿದೆ. ಇಂತಹ ಭಕ್ತಿ ಹಾಗೂ ಶಕ್ತಿ ಸ್ಥಳಕ್ಕೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಕೂಡ ತೆರಳಿತ್ತು.
ಲಂಡನ್‌ನಲ್ಲಿ ಕನ್ನಡಪ್ರಭ - ಏಷ್ಯಾನೆಟ್ ಸುವರ್ಣನ್ಯೂಸ್‌ನ ಇಂಡಿಯಾ: ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್