ಮೋದಿ ಸರ್ಕಾರ ಉರುಳಿಸಲು ಬೈಡೆನ್ ಹಣ ನೀಡಿದ್ರಾ?: ಟ್ರಂಪ್ ಗಂಭೀರ ಆರೋಪ!

ಡೊನಾಲ್ಡ್ ಟ್ರಂಪ್, ಬೈಡೆನ್ ಸರ್ಕಾರವು ಮೋದಿ ಸರ್ಕಾರವನ್ನು ಸೋಲಿಸಲು ಪ್ರಯತ್ನಿಸಿತು ಎಂದು ಆರೋಪಿಸಿದ್ದಾರೆ. ಮತದಾನ ಹೆಚ್ಚಳದ ನೆಪದಲ್ಲಿ ವಿಪಕ್ಷಗಳಿಗೆ ಅಮೆರಿಕ ಹಣ ನೀಡಿತ್ತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಚುನಾವಣಾ ಆಯೋಗವು ವಿದೇಶಿ ಹಣ ಪಡೆದಿಲ್ಲ ಎಂದು ಹೇಳಿದೆ.

Share this Video
  • FB
  • Linkdin
  • Whatsapp

ನವದೆಹಲಿ (ಫೆ.20): ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಸೋಲಿಸಲು ಬೈಡೆನ್ ಸರ್ಕಾರದಿಂದ ಪ್ರಯತ್ನಿಸಲಾಗಿತ್ತು ಎನ್ನುವ ಗಂಭೀರ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದಾರೆ. ಮತದಾನ ಹೆಚ್ಚಳ ರೂಪದಲ್ಲಿ ವಿಪಕ್ಷಗಳಿಗೆ ಅಮೆರಿಕ ಹಣ ಕೊಟ್ಟಿತ್ತೇ ಎನ್ನುವ ಪ್ರಶ್ನೆಗಳು ಎದ್ದಿವೆ.

ಮೋದಿ ಸರ್ಕಾರ ಬದಲಿಸಲು ಜೋ ಬೈಡೆನ್ ಸರ್ಕಾರ ಬಯಸಿತ್ತೇ, ಇತ್ತೀಚೆಗಷ್ಟೇ ಟ್ರಂಪ್ 21 ಮಿಲಿಯನ್ ದೇಣಿಗೆ ಬಂದ್ ಮಾಡಿದ್ದರು. ಬಿಜೆಪಿ ಮತ್ತು ಮೋದಿ ಟಾರ್ಗೆಟ್ ಮಾಡಿ 180 ಕೋಟಿ ದೇಣಿಗೆಯನ್ನು ಬೈಡೆನ್‌ ಸರ್ಕಾರ ನೀಡಿತ್ತು ಎನ್ನಲಾಗಿದೆ.

ಭಾರತದ ಬಳಿ ಸಾಕಷ್ಟು ಹಣವಿದೆ, ನಾವೇಕೆ ಕೊಡಬೇಕು 2 ಕೋಟಿ ಡಾಲರ್; ಟ್ರಂಪ್ ಪ್ರಶ್ನೆ

ಭಾರತದಲ್ಲಿ ಬೇರೊಬ್ಬರ ಸರ್ಕಾರ ತರಲು ಪ್ರಯತ್ನ ಎಂದು ಟ್ರಂಪ್‌ ಹೇಳಿದ್ದಾರೆ. ‘ಇದೇ ಕಾರಣಕ್ಕೆ ಮತದಾನ ಹೆಚ್ಚಳದ ನೆಪದಲ್ಲಿ ಅಮೆರಿಕದ ಹಣ’ ಹೋಗಿತ್ತು ಎಂದು ಆರೋಪಿಸಿದ್ದಾರೆ. ಭಾರತದಲ್ಲೇ ದುಡ್ಡಿದೆ.. ನಮ್ಮ ದುಡ್ಡೇಕೆ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮತದಾನ ಹೆಚ್ಚಳಕ್ಕೆ ವಿದೇಶಿ ಹಣ ಪಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

Related Video