ಭಾರತದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ನೀಡುತ್ತಿದ್ದ 2 ಕೋಟಿ ಡಾಲರ್ ನೆರವನ್ನು ನಿಲ್ಲಿಸುವ DOGE ವಿಭಾಗದ ನಿರ್ಣಯವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಭಾರತಕ್ಕೆ ಇಷ್ಟೊಂದು ಆರ್ಥಿಕ ಸಹಾಯ ಏಕೆ ಎಂದು ಪ್ರಶ್ನಿಸಿದ ಅವರು, ಮತದಾರರ ಪ್ರಭಾವಕ್ಕೆ ಹಣ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ವಾಷಿಂಗ್ಟನ್ ಡಿಸಿ: ಭಾರತದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ನೀಡುತ್ತಿದ್ದ 2 ಕೋಟಿ ಡಾಲರ್ ಫಂಡಿಂಗ್ ನಿಲ್ಲಿಸಿರುವ DOGE (Department of Government Efficiency) ವಿಭಾಗದ ನಿರ್ಣಯವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಭಾರತದಂತಹ ರಾಷ್ಟ್ರಕ್ಕೆ ಇಷ್ಟೊಂದು ಆರ್ಥಿಕ ಸಹಾಯ ಅಗತ್ಯವೇನಿದೆ ಎಂದು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ನಾವು ಭಾರತಕ್ಕೆ ಯಾವ ಕಾರಣಕ್ಕಾಗಿ 2 ಕೋಟಿ ಡಾಲರ್ ನೀಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿರುವ ಡೊನಾಲ್ಡ್ ಟ್ರಂಪ್, ಅವರ ಬಳಿ ಸಾಕಷ್ಟು ಹಣವಿದೆ. ವಿಶ್ವದಲ್ಲಿಯೇ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡುವ ದೇಶಗಳಲ್ಲಿ ಭಾರತ ಸಹ ಒಂದಾಗಿದೆ. ನಾನು ಭಾರತ ಮತ್ತು ಅಲ್ಲಿಯ ಪ್ರಧಾನ ಮಂತ್ರಿಗಳನ್ನು ಗೌರವಿಸುತ್ತೇನೆ. ಆದ್ರೆ ವೋಟರ್ ಟರ್ನ್ ಔಟ್‌ಗಾಗಿ ನಾವೇಕೆ 2 ಕೋಟಿ ಡಾಲರ್ ನೀಡಬೇಕು ಎಂದು ಡೊನಾಲ್ಡ್ ಟ್ರಂಪ್ ಪ್ರಶ್ನೆ ಮಾಡಿದ್ದಾರೆ.
ಫೆಬ್ರವರಿ 16ರಂದು ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ DOGE, ವಿದೇಶಗಳಿಗೆ ನೀಡಲಾಗುತ್ತಿರುವ ಅನುದಾನ ಸ್ಥಗಿತಗೊಳಿಸುವ ಘೋಷಣೆ ಮಾಡಿತ್ತು. ಭಾರತದ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು (ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರಲು) ಅಮೆರಿಕ ಇರಿಸಿದ್ದ 21 ದಶಲಕ್ಷ ಡಾಲರ್ (180 ಕೋಟಿ ರು.) ನಿಧಿಯನ್ನು ಆ ದೇಶದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್ ಅಧ್ಯಕ್ಷತೆಯ ‘ಅಮೆರಿಕ ಕ್ಷಮತಾ ಇಲಾಖೆ (ಡಾಜ್) ರದ್ದು ಮಾಡಿತ್ತು. ಅಮೆರಿಕದ ತೆರಿಗೆದಾರರ ಹಣ ಅಮೆರಿಕದ ಅಭಿವೃದ್ಧಿಗೆ ಬಳಕೆ ಆಗಬೇಕೇ ವಿನಾ, ನಿರರ್ಥಕ ವಿದೇಶಿ ವಿಷಯಗಳಿಗೆ ಅಲ್ಲ ಎಂಬ ಕಾರಣ ನೀಡಿ ಅವರು ಈ ನಿಧಿ ರದ್ದು ಮಾಡಿದ್ದಾರೆ. ಇದಲ್ಲದೆ ಅನೇಕ ವಿದೇಶಗಳ ನಿಧಿಯನ್ನೂ ರದ್ದುಗೊಳಿಸಲಾಗಿದೆ. ಇದು ಟ್ರಂಪ್ ಆಡಳಿತದ ಮಿತವ್ಯಯ ಮಂತ್ರ ಪಠಣದ ಭಾಗವಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಈ ಹಿಂದೆಯೂ ಭಾರತದ ಕುರಿತು ಹಲವು ಹೇಳಿಕೆಗಳನ್ನು ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಭಾರತ ಆಮದು ಉತ್ಪನ್ನಗಳ ಮೇಲಿನ ಹೆಚ್ಚಿನ ಸುಂಕ ವಿಧಿಸುತ್ತದೆ. ಹೆಚ್ಚು ಆಮದು ಸುಂಕ ವಿಧಿಸುವ ದೇಶಗಳಲ್ಲಿ ಭಾರತ ಸಹ ಒಂದಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಇದನ್ನೂ ಓದಿ: ಭಾರತಕ್ಕೆ ಅತಿದೊಡ್ಡ ಶಾಕ್ ಕೊಟ್ಟ ಟ್ರಂಪ್; ಭವಿಷ್ಯದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಕೊಕ್ಕೆ?
ಏನಿದು DOGE?
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ರಚನೆಯಾದ ಬಳಿಕ DOGE ಹೊಸ ವಿಭಾಗದ ರಚನೆ ಮಾಡಲಾಗಿದೆ. ಉದ್ಯಮಿ ಎಲಾನ್ ಮಸ್ಕ್ ನೇತೃತ್ವದಲ್ಲಿ ಈ DOGE ಎಂಬ ವಿಭಾಗವನ್ನು ಡೊನಾಲ್ಡ್ ಟ್ರಂಪ್ ರಚಿಸಿದ್ದಾರೆ. ಡೊಜೊಕಾಯಿನ್ ಅನ್ನೋದು ಜನಪ್ರಿಯ ಕ್ರಿಪ್ಟೋಕರೆನ್ಸಿಗಳಲ್ಲಿ ಒಂದಾಗಿದೆ. 2013ರಲ್ಲಿ Dogecoin ಕ್ರಿಪ್ಟೋಕರೆನ್ಸಿಯನ್ನು Billy Markus ಮತ್ತು Jackson Palmer ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾಯಿನ್ ಮೇಲೆ Shiba Inu Dog ಫೋಟೋ ಸಹ ಮುದ್ರಣ ಮಾಡಲಾಗಿತ್ತು. ಬಿಟ್ ಕಾಯಿನ್ ಮತ್ತು ಇತರೆ ಕ್ರಿಪ್ಟೋಕರೆನ್ಸಿಯನ್ನು ತಮಾಷೆ ಮಾಡುವ ಉದ್ದೇಶದಿಂದ Dogecoin ಮಾಡಲಾಗಿದೆ ಎಂದು ವರದಿಯಾಗಿತ್ತು.
ಆದ್ರೆ 2021ರಲ್ಲಿ ಕ್ರಿಪ್ಟೊಕರೆನ್ಸಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಎಲಾನ್ ಮಸ್ಕ್ ಕಾರಣವಾಗಿದ್ದರು. ಈ ಸಂಬಂಧ ಎಲಾನ್ ಮಸ್ಕ್ ಟ್ವೀಟ್ ಮಾಡಲಾರಂಭಿಸಿದ್ದರು. Dogecoinಗೆ ಜನರು DOGE ಎಂದು ಕರೆಯಲಾರಂಭಿಸಿದರು. ಇದರ ಮೀಮ್‌ಗಳು ವೈರಲ್ ಆದ ನಂತರ, ಕ್ರಿಪ್ಟೋಕರೆನ್ಸಿ ಆಸಕ್ತರ ಆಸಕ್ತಿಯು Dogecoin ಕಡೆಗೆ ಹೆಚ್ಚಾಯಿತು.
ಇದನ್ನೂ ಓದಿ: ಟ್ರಂಪ್ ಸರ್ಕಾರದಿಂದ ವೆಚ್ಚ ಕಡಿತ: 10,000 ಸರ್ಕಾರಿ ನೌಕರರು ಕೆಲಸದಿಂದ ವಜಾ!
