ಚೀನಾ ಆಟಕ್ಕೆ ಅಮೆರಿಕ ಲಗಾಮು, ದೊಡ್ಡಣ್ಣ ಕೊಟ್ಟಿದ್ದಾನೆ ದೊಡ್ಡ ಶಾಕ್..!

ಚೀನಾ ಹಾಗೂ ಅಮೆರಿಕಾ ಸಂಬಂಧ ಎಣ್ಣೆ ಸೀಗೆಕಾಯಿ ಇದ್ದಂತೆ. ಒಬ್ಬರನ್ನೊಬ್ಬರು ಮಟ್ಟ ಹಾಕಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌,  ಟಿಬೆಟ್‌ ಮೇಲೆ ಚೀನಾ ಹಿಡಿತವನ್ನು ಕುಗ್ಗಿಸುವ ಮಹತ್ವದ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ (ಡಿ. 30): ಚೀನಾ ಹಾಗೂ ಅಮೆರಿಕಾ ಸಂಬಂಧ ಎಣ್ಣೆ ಸೀಗೆಕಾಯಿ ಇದ್ದಂತೆ. ಒಬ್ಬರನ್ನೊಬ್ಬರು ಮಟ್ಟ ಹಾಕಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಟಿಬೆಟ್‌ ಮೇಲೆ ಚೀನಾ ಹಿಡಿತವನ್ನು ಕುಗ್ಗಿಸುವ ಮಹತ್ವದ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ.

ಪಿಎಂ ಮೋದಿ ಗಡ್ಡದ ಹಿಂದಿನ ಗುಟ್ಟು, ಹಿಂದಿದೆಯಾ ಈ ಮಹದುದ್ದೇಶ..?

ಈ ಕಾಯ್ದೆಯ ಪ್ರಕಾರ ಟಿಬೆಟ್‌ನಲ್ಲಿ ತನ್ನದೇ ಆದ ದೂತಾವಾಸ ಸ್ಥಾಪಿಸುವ ಉದ್ದೇಶವನ್ನು ಅಮೆರಿಕ ಹೊಂದಿದೆ ಹಾಗೂ ಬೌದ್ಧರ ಧರ್ಮಗುರು ದಲೈಲಾಮಾ ಉತ್ತರಾಧಿಕಾರಿ ನೇಮಕದಲ್ಲಿ ಚೀನಾ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ, ಕೇವಲ ಟಿಬೆಟನ್‌ ಬೌದ್ಧ ಸಮುದಾಯಕ್ಕೆ ಪರಮಾಧಿಕಾರ ನೀಡಲು ಉದ್ದೇಶಿಸಲಾಗಿದೆ.

Related Video