ದೊಡ್ಡಣ್ಣನನ್ನೇ ನಲುಗಿಸಿದ ಪ್ರತಿಭಟನೆ; ಬಂಕರ್‌ನಲ್ಲಿ ಅಡಗಿ ಕುಳಿತ ಟ್ರಂಪ್!

ಕೊರೊನಾ ಅಟ್ಟಹಾಸದ ನಡುವೆಯೇ ಜನಾಂಗೀಯ ಪ್ರತಿಭಟನೆಯ ಬಿಸಿಗೆ ಅಮೆರಿಕಾ ನಲುಗಿದೆ. ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಬಳಿಕ ಅಮರಿಕಾದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತಷ್ಟು ನಗರಗಳಿಗೆ ವ್ಯಾಪಿಸಿದೆ. 

First Published Jun 3, 2020, 5:17 PM IST | Last Updated Jun 3, 2020, 5:17 PM IST

ನವದೆಹಲಿ (ಜೂ. 03): ಕೊರೊನಾ ಅಟ್ಟಹಾಸದ ನಡುವೆಯೇ ಜನಾಂಗೀಯ ಪ್ರತಿಭಟನೆಯ ಬಿಸಿಗೆ ಅಮೆರಿಕಾ ನಲುಗಿದೆ. ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಬಳಿಕ ಅಮರಿಕಾದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತಷ್ಟು ನಗರಗಳಿಗೆ ವ್ಯಾಪಿಸಿದೆ. 

ಪ್ರತಿಭಟನೆಗೆ ಬೆಚ್ಚಿ ಬಂಕರಲ್ಲಿ ಅಡಗಿದ ಡೊನಾಲ್ಡ್‌ ಟ್ರಂಪ್‌!

ಶ್ವೇತ ಭವನದ ಸುತ್ತಮುತ್ತ ಏಕಾಏಕಿ ಭಾರೀ ಪ್ರಮಾಣದಲ್ಲಿ ಪ್ರತಿಭಟನಾಕಾರರು ಆಗಮಿಸಿದ ಹಿನ್ನಲೆಯಲ್ಲಿ ಬೇಹುಗಾರಿಕಾ ಪಡೆ ಹಾಗೂ ಇತರ ಭದ್ರತಾ ಪಡೆಗಳು ಮುನ್ನಚ್ಚರಿಕಾ ಕ್ರಮವಾಗಿ ಬಂಕರ್‌ಗೆ ಕರೆದೊಯ್ದು ರಕ್ಷಣೆ ಒದಗಿಸಿದರು. ಒಂದು ತಾಸು ಬಂಕರ್‌ನಲ್ಲಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮೇಲಕ್ಕೆ ಕರೆ ತರಲಾಯಿತು. ಅಮೆರಿಕಾ ಅಧ್ಯಕ್ಷರನ್ನು ಬಂಕರ್‌ನಲ್ಲಿ ಅಡುಗುವಂತೆ ಮಾಡಿದ ಪ್ರತಿಭಟನೆ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. 

 

Video Top Stories