ಬೆಳದಿಂಗಳ ಬಾಲೆಯರ ಜೊತೆ ಸೆಕ್ಸ್, ಟ್ರಂಪ್ ರಾಜಕೀಯ ಜೀವನವೀಗ ರಿಸ್ಕ್!
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಅಶ್ಲೀಲ ಚಿತ್ರಗಳಲ್ಲಿ ನಟಿಸುವ ಇಬ್ಬರು ತಾರೆಯರ ಜೊತೆಗಿನ ಅವರ ಸಂಬಂಧ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಟ್ರಂಪ್ ವಿರುದ್ಧ ಒಂದಲ್ಲ, ಎರಡಲ್ಲ ಐದು ಆರೋಪಗಳಿವೆ. ಇದು ಯಾರು ಹಣೆದ ವಿಚಿತ್ರ ಸಂಚು ಅನ್ನೋದೇ ಗೊತ್ತಾಗುತ್ತಿಲ್ಲ.
ನವದೆಹಲಿ (ಏ.6): ಅಮೆರಿಕಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಾಜಿ ಅಧ್ಯಕ್ಷನ ಮೇಲೆ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆ ಇಬ್ಬರು ಮಾಯಂಗನೆಯರ ಸಹವಾಸ ಮಾಡಿದ್ದೋ, ಅಥವಾ ತೆರಿಗೆ ವಂಚನೆ ಆರೋಪವೋ, ಟ್ರಂಪ್ ಪಾಲಿಗೆ ಶಾಪವಾಗಿದ್ದೇನೇನು? ಟ್ರಂಪ್ ಮಾಡಿದ ಅಪರಾಧವಾದ್ರೂ ಏನು? ಅನ್ನೋದೇ ಈಗಿರುವ ಕುತೂಹಲ.
ಟ್ರಂಪ್ ವಿರುದ್ಧ ದಾಖಲಾಗಿರುವ 5 ಆರೋಪಗಳು, ಅವರ ವಿರುದ್ಧ ಹೆಣೆದಿರೋ ವಿಚಿತ್ರ ಸಂಚು ಎಂದೇ ಹೇಳುತ್ತಿದ್ದಾರೆ. ಜೈಲು ಸೇರೋ ಭೀತಿಯಲ್ಲಿರೋ ಡೊನಾಲ್ಡ್ ಟ್ರಂಪ್, ಮತ್ತೊಂದು ಎಲೆಕ್ಷನ್ ಗೆಲ್ಲೋ ಕನಸು ಕಾಣ್ತಾ ಇದಾರಾ? ಅಕಸ್ಮಾತ್ ಜೈಲುವಾಸವೇ ಕನ್ಫರ್ಮ್ ಆದರೆ, ಟ್ರಂಪ್ ವಿರುದ್ಧ ಮುಂದಿರುವ ಮಾರ್ಗ ಏನು ಅನ್ನೋ ಚರ್ಚೆ ಆಗುತ್ತಿದೆ.
ಪೋರ್ನ್ ನಟಿ ಜತೆ ಸೆಕ್ಸ್: ಟ್ರಂಪ್ ವಿರುದ್ಧ ದೋಷಾರೋಪ; ತಕ್ಷಣವೇ ಜೈಲಿಗೆ ಹೋಗ್ತಾರಾ ಅಮೆರಿಕ ಮಾಜಿ ಅಧ್ಯಕ್ಷ..?
ಟ್ರಂಪ್ ವಿರುದ್ಧ ಅಮೆರಿಕಾದಲ್ಲಿ ವ್ಯೂಹ.. ಷಡ್ಯಂತ್ರಗಳು ಸಿದ್ಧವಾಗಿವೆ.. ಹೇಗಾದ್ರೂ ಸರಿ, ಟ್ರಂಪ್ ಜೈಲುಪಾಲಾಗಲೇಬೇಕು ಅನ್ನೋದು, ಬೈಡನ್ ಪಾಳಯದ ಕನಸು ಅಂತಿದ್ದಾರೆ.. ಅಷ್ಟಕ್ಕೂ ಮಾಜಿ ಅಧ್ಯಕ್ಷ ಜೈಲಿಗೆ ಹೋದ್ರೆ, ಬೈಡೆನ್‌ಗೆ ಲಾಭವೂ ಆಗಲಿದೆ.