ಕೋವ್ಯಾಕ್ಸಿನ್ ಪಡೆದು ವಿದೇಶಕ್ಕೆ ಹೋಗಲು ಬಯಸುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನೋಡಿ
- ಕೋವ್ಯಾಕ್ಸಿನ್ ಪಡೆದವರಿಗೆ ಸದ್ಯಕ್ಕೆ ವಿದೇಶಯಾತ್ರೆ ಭಾಗ್ಯವಿಲ್ಲ
- ಅನೇಕ ದೇಶಗಳು ಲಸಿಕೆಗೆ ಮನ್ನಣೆ ನೀಡಿಲ್ಲ
- ಈವರೆಗೆ 9 ದೇಶಗಳಿಗೆ ಮಾತ್ರ ಕೋವ್ಯಾಕ್ಸಿನ್‌ಗೆ ಮನ್ನಣೆ
- ಡಬ್ಲುಎಚ್‌ಒ ಮನ್ನಣೆಗೆ ಕಾಯುತ್ತಿರುವ ಭಾರತ್ ಬಯೋಟೆಕ್
ನವದೆಹಲಿ (ಮೇ. 24): ಅನೇಕ ವಿದೇಶಗಳು ಈಗ ತಮ್ಮ ಗಡಿ ತೆರೆಯಲು ಉದ್ದೇಶಿಸಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮಾನ್ಯತೆ ಪಡೆದಿರುವ ಲಸಿಕೆಗಳನ್ನು ಪಡೆದವರಿಗೆ ತಮ್ಮ ದೇಶಕ್ಕೆ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳತೊಡಗಿವೆ. ಆದರೆ ಡಬ್ಲುಎಚ್‌ಒ ಮಾನ್ಯತೆಯು ಕೋವ್ಯಾಕ್ಸಿನ್ ಲಸಿಕೆಗೆ ಸಿಗದ ಕಾರಣ ಈ ಲಸಿಕೆಗೆ ಅನೇಕ ದೇಶಗಳು ಈವರೆಗೂ ಮಾನ್ಯತೆ ನೀಡಿಲ್ಲ. ಈವರೆಗೆ 9 ದೇಶಗಳು ಮಾತ್ರ ಲಸಿಕೆಗೆ ಮನ್ನಣೆ ನೀಡಿವೆ. ಹೀಗಾಗಿ ಕೋವ್ಯಾಕ್ಸಿನ್ ಪಡೆದ ವಿದೇಶ ಪ್ರಯಾಣ ಆಕಾಂಕ್ಷಿಗಳು, ಈ ಲಸಿಕೆಗೆ ವಿಶ್ವಮನ್ನಣೆ ದೊರಕುವವರೆಗೆ ಕಾಯಲೇಬೇಕು. ಈ ಬಗ್ಗೆ ಒಂದು ವರದಿ ನೋಡೋಣ ಬನ್ನಿ..!