ಪೆಲೋಸಿ ಮೇಲೆ ಚೀನಾ ನಿರ್ಬಂಧ, ತೈವಾನ್ ಗಡಿಯಲ್ಲೇ ಡ್ರೋನ್ ಹಾರಿಸಿ ಯುದ್ಧ ಸನ್ನದ್ಧತೆ ಪರೀಕ್ಷೆ
ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ವಿರುದ್ಧ ತನ್ನ ಆಕ್ರೋಶ ಮುಂದುವರೆಸಿರುವ ಚೀನಾ, ಇದೀಗ ನ್ಯಾನ್ಸಿ ಪೆಲೋಸಿ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ.
ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ವಿರುದ್ಧ ತನ್ನ ಆಕ್ರೋಶ ಮುಂದುವರೆಸಿರುವ ಚೀನಾ, ಇದೀಗ ನ್ಯಾನ್ಸಿ ಪೆಲೋಸಿ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ. ಜೊತೆಗೆ ತೈವಾನ್ ಸುತ್ತಲೂ ತನ್ನ ಸೇನೆ ನಡೆಸುತ್ತಿರುವ ಸೇನಾ ಕವಾಯತಿಗೆ ಮತ್ತೆ 100 ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ ತೈವಾನ್ ವಿರುದ್ಧ ತನ್ನ ಕಪಿಮುಷ್ಠಿ ಬಿಗಿಗೊಳಿಸುವ ಯತ್ನವನ್ನು ಮುಂದುವರೆಸಿದೆ.
ಸೇನಾ ಕಾರ್ಯಾಚರಣೆ ಸೂಚನೆ, 21 ಚೀನಾ ಯುದ್ಧವಿಮಾನ ತೈವಾನ್ ಪ್ರವೇಶ!
ಚೀನಾ ಸೇನೆಯ ಕವಾಯತು ಮತ್ತು ಮಾಹಿತಿ ಸಂಗ್ರಹ ಯುದ್ಧ ತಂತ್ರಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಅಗತ್ಯ ಬಿದ್ದರೆ ಪ್ರತಿರೋಧಕ್ಕೆ ನಾವು ಸಿದ್ಧವಾಗಿದ್ದೇವೆ ಎಂದು ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ತೈವಾನ್‌ಗೆ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಚೀನಾ, ಅಮೆರಿಕ ಮತ್ತು ತೈವಾನ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಈ ಸೇನಾ ಕವಾಯತು ನಡೆಸುತ್ತಿದೆ.