Asianet Suvarna News Asianet Suvarna News

ಚೀನಾ ತೈವಾನ್ ಯುದ್ಧವಾದ್ರೆ, ತೈವಾನ್ ಸಹಾಯಕ್ಕೆ ಬರುತ್ತಾ ಅಮೆರಿಕಾ.?

ತೈವಾನ್‌ಗೆ ಅಮೆರಿಕದ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಚೀನಾ, ಅಮೆರಿಕ ಮತ್ತು ತೈವಾನ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಸೇನಾ ಕವಾಯತು ನಡೆಸುತ್ತಿದೆ. 

ತೈವಾನ್‌ಗೆ ಅಮೆರಿಕದ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಚೀನಾ, ಅಮೆರಿಕ ಮತ್ತು ತೈವಾನ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಸೇನಾ ಕವಾಯತು ನಡೆಸುತ್ತಿದೆ. ಚೀನಾದ ಈ ಯತ್ನವನ್ನು ತನ್ನ ಮೇಲಿನ ದಾಳಿಯ ಯತ್ನ ಎಂದು ಬಣ್ಣಿಸಿರುವ ತೈವಾನ್‌, ತನ್ನ ಭೂ, ವಾಯು ಮತ್ತು ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವುದಾಗಿ ತಿಳಿಸಿದೆ.

ಪೆಲೋಸಿ ಮೇಲೆ ಚೀನಾ ನಿರ್ಬಂಧ, ತೈವಾನ್ ಗಡಿಯಲ್ಲೇ ಡ್ರೋನ್ ಹಾರಿಸಿ ಯುದ್ಧ ಸನ್ನದ್ಧತೆ ಪರೀಕ್ಷೆ

ತೈವಾನ್‌ ತನ್ನ ಭೂಭಾಗ ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಚೀನಾ, ತನ್ನ ಮುಖ್ಯ ಭೂಭಾಗದೊಂದಿಗೆ ಅಗತ್ಯ ಬಿದ್ದರೆ ಬಲಪ್ರಯೋಗ ನಡೆಸಿಯಾದರೂ ತೈವಾನ್‌ ಸೇರಿಸಿಕೊಳ್ಳುವ ಹೆಬ್ಬಯಕೆ ಹೊಂದಿದೆ. ಹೀಗಾಗಿ ತೈವಾನ್‌ ಜತೆ ಯಾವುದೇ ದೇಶಗಳು ರಾಜತಾಂತ್ರಿಕ ಸಂಬಂಧ ಇಟ್ಟುಕೊಳ್ಳಬಾರದು ಎಂದು ತಾಕೀತು ಮಾಡಿದೆ. 

ಚೀನಾ ಒಂದು ಕಡೆ ಯುದ್ಧೋನ್ಮಾದ ಸ್ಥಿತಿಯಲ್ಲಿದ್ರೆ ಇನ್ನೊಂದು ಕಡೆಯಲ್ಲಿ ತೈವಾನ್ ದೇಶ ಉಕ್ರೇನ್ ಸ್ಥಿತಿಯನ್ನ ತಲುಪುತ್ತಾ ಅನ್ನೋ ಅನುಮಾನ ದಟ್ಟವಾಗಿದೆ. ಚೀನಾ- ತೈವಾನ್ ಯುದ್ಧವಾದರೆ ಪರಿಣಾಮ ಏನು..? ಇಲ್ಲಿದೆ ಡಿಟೇಲ್ಸ್..!

 

Video Top Stories