Asianet Suvarna News Asianet Suvarna News

ಜನಸಂಖ್ಯೆ ಕುಸಿತ, ಹೊಸ ನೀತಿ ಜಾರಿಗೆ ತಂದ ಚೀನಾ, ಕಾರಣ ಏನು?

Jun 2, 2021, 10:02 AM IST

ಬೀಜಿಂಗ್ (ಜೂ. 02): ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಚೀನಾ ದಲ್ಲಿ ಇದೀಗ ಜನಸಂಖ್ಯೆ ಕೊರತೆ ಭೀತಿ ಎದುರಾಗಿದೆ. ಹೀಗಾಗಿ 5 ವರ್ಷಗಳ ಹಿಂದೆ ದೇಶದ ಬಹುತೇಕ ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಆ ಮಿತಿಯನ್ನು ಮೂರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಟಿಬೆಟ್ ಗಡಿಭಾಗದಲ್ಲಿ ಚೀನಾ ಭಾರೀ ಸಿದ್ಧತೆ, ಆತಂಕಕಾರಿ ವಿಚಾರ ಬೆಳಕಿಗೆ!

ಪ್ರಸಕ್ತ 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 2022ರ ವೇಳೆಗೆ ತನ್ನ ಗರಿಷ್ಠ ಮಟ್ಟಮುಟ್ಟಿ, ಬಳಿಕ ಜನಸಂಖ್ಯೆಯಲ್ಲಿ ಇಳಿಕೆ ಕಾಣಲಿದೆ. ಇದು ಭವಿಷ್ಯದಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ 2016ರಲ್ಲಿ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಅದನ್ನು 3ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ.