ಲಂಕೆಯ ಬೆಂಕಿಗೂ, ಪಾಕ್ ಪತನದ ಹಿಂದೆಯೂ ಚೀನೀ ಹಣದ ಕೈವಾಡ!

ಚೀನಾ ಹೆಣೆದ ಸಾಲ ವ್ಯೂಹದಲ್ಲಿ ವಿಲವಿಲ ಅಂತಿವೆ ಬರೋಬ್ಬರಿ 64 ದೇಶಗಳು ಲಂಕೆಗೆ ಬೆಂಕಿ ಬಿದ್ದಾಯ್ತ, ಪಾಕ್ ಪತನವೂ ಆಯ್ತು,ಈಗ ಚೀನಾ ನೆಕ್ಸ್ಟ್ ಟಾರ್ಗೆಟ್ ಯಾರು..? ಹೇಗಿದೆ ಗೊತ್ತಾ ಅತಿ ಭೀಕರ, ಭಯಂಕರ, ಚೀನಾದ ನಿಗೂಢ ಸಾಲದ ಶೂಲ ವ್ಯೂಹ..? 

First Published Apr 11, 2022, 3:37 PM IST | Last Updated Apr 11, 2022, 3:38 PM IST

ನವದೆಹಲಿ(ಏ.11): ಚೀನಾ ಸಾಲ ಕೊಟ್ಟಿದ್ದು ಗೊತ್ತಾಗ್ಬೋದು.. ಈ ದೇಶ ಸಾಲ ಪಡೆದಿದ್ದು ಗೊತ್ತಾಗ್ಬೋದು.. ಅಷ್ಟು ಬಿಟ್ರೆ ಇನ್ಯಾವ ಮಾಹಿತಿಯೂ ಯಾರಿಗೂ ಎಲ್ಲೂ ಸಿಗೋಕೆ ಸಾಧ್ಯವೇ ಇಲ್ಲ.. ಹಾಗಾಗಿನೇ, ಚೀನಾ ಕೊಡೋ ಸಾಲ ಸಾಲ ಅಲ್ಲ, ಶೂಲ ಅಂತ ಹೇಳೋದು

ಚೀನಾ ಕೊಡೋ ಸಾಲ ತೀರಿಸೋದು ಅಂದ್ರೆ ಅದು ಬಿಳಿ ಆನೇನ ಸಾಕೋ ಥರ. ಇಲ್ಲಿ ತನಕ ಚೀನಾ ಸಾಲ ಕೊಟ್ಟಿರೋದು ಹೆಚ್ಚಾಗಿ, ಇಂಧನ, ಇನ್ಫ್ರಾಸ್ಟ್ರಕ್ಚರ್, ಮತ್ತು ಗಣಿಗಾರಿಕೆಗೆ.. ಇವುಗಳಲ್ಲಿ ಯಾವುದೂ ಕೂಡ ಕಡಿಮೆ ರೇಟಲ್ಲಿ ಮುಗಿಯೋದಿಲ್ಲ.ಎಲ್ಲಾ ಕೂಡ ಲಾರ್ಜ್ ಸ್ಕೇಲ್ ಇನ್ವೆಸ್ಟ್ಮೆಂಟುಗಳೇ. ಇದರ ಎಫೆಕ್ಟ್ ಹೇಗಿರುತ್ತೆ ಅಂದ್ರೆ, ಒಂದು ವರದಿಯ ಪ್ರಕಾರ, 2005ರಲ್ಲಿ ಚೀನಾ ಕೊಟ್ಟಿದ್ದ ಸಾಲ, ಸಾಲ ಪಡೆದ ದೇಶದ ಜಿಡಿಪಿಯ 1 ಪರ್ಸಂಟ್ನಷ್ಟಿದ್ದರೆ, 2017ವೇಳೆಗೆ ಜಿಡಿಪೊಯ 15 ಪರ್ಸಂಟ್ ಆಗೋಗಿತ್ತು.. ಈಗ ಅದನ್ನೂ ಮೀರಿರುತ್ತೆ ಅನ್ನೋದು ತಜ್ಞರ ಅಭಿಪ್ರಾಯ. ಈ ಕುರಿತಾದ ಮತ್ತಷ್ಟು ವಿವರ ವಿಡಿಯೋದಲ್ಲಿ