Asianet Suvarna News Asianet Suvarna News

ಡ್ಯ್ರಾಗನ್ ಸೊಕ್ಕು ಮುರಿಯಲು ಸಿದ್ಧವಾಗಿದೆ 52 ಅಸ್ತ್ರಗಳು

ಗಡಿಯಲ್ಲಿನ ಸಂಘರ್ಷದ ಬಳಿಕ ಚೀನಾ ವಿರುದ್ಧ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ರಾಷ್ಟ್ರವ್ಯಾಪಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿದೆ.
 

ನವದೆಹಲಿ (ಜೂ. 19): ಗಡಿಯಲ್ಲಿನ ಸಂಘರ್ಷದ ಬಳಿಕ ಚೀನಾ ವಿರುದ್ಧ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ರಾಷ್ಟ್ರವ್ಯಾಪಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಟಿಐ) ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ‘ಭಾರತೀಯ ಸಾಮಾನ್‌- ಹಮಾರಾ ಅಭಿಯಾನ್‌’ ಆರಂಭಿಸಿದ್ದರೆ, ವಿಶ್ವಹಿಂದು ಪರಿಷತ್‌ ಜನರ ಮನೆ ಬಾಗಿಲಿಗೆ ತೆರಳಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಮನವಿ ಮಾಡಲು ತೀರ್ಮಾನಿಸಿದೆ. ಇದೇ ವೇಳೆ ಈ ಅಭಿಯಾನಕ್ಕೆ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಹಾಗೂ ರಾಮದಾಸ್‌ ಅಠಾವಳೆ ಕೈಜೋಡಿಸಿದ್ದಾರೆ.

ಒತ್ತೆಯಿಟ್ಟಿದ್ದ 10 ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದ ಚೀನಾ

‘ಭಾರತೀಯ ಸಾಮಾನ್‌- ಹಮಾರಾ ಅಭಿಯಾನ್‌’ದಲ್ಲಿ ಪಾಲ್ಗೊಳ್ಳುವಂತೆ ಬಾಲಿವುಡ್‌ ಸೆಲೆಬ್ರಿಟಿಗಳು ಹಾಗೂ ಕ್ರೀಡಾಪಟುಗಳಿಗೆ ಸಿಎಟಿಐ ಬಹಿರಂಗ ಪತ್ರವೊಂದನ್ನು ಬರೆದಿದೆ. ಚೀನಾ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿ ಆಗಿರುವ ಸೆಲೆಬ್ರಿಟಿಗಳಾದ ಅಮೀರ್‌ ಖಾನ್‌, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್‌, ವಿರಾಟ್‌ ಕೊಹ್ಲಿ ಹಾಗೂ ಇತರರಿಗೆ ಜಾಹೀರಾತು ಗುತ್ತಿಗೆಯನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದೆ. ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

 

Video Top Stories