ಅಫ್ಘಾನ್‌ನಲ್ಲಿ ತಾಲಿಬಾನ್- ಐಸಿಸ್ ಉಗ್ರರ ನಡುವೆ ಸಂಘರ್ಷ..?
- ಕುಂದುಜ್ ನಗರದ ಮಸೀದಿಯಲ್ಲಿ ಶಿಯಾ ಸಮುದಾಯದಿಂದ ಪ್ರಾರ್ಥನೆ
- ಈ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟ. ಸ್ಥಳದಲ್ಲಿದ್ದ ಬಹುತೇಕರ ಸಾವು
- ಶಿಯಾ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವ ಐಸಿಸ್. ಹೀಗಾಗಿ ಶಂಕೆ ದಟ್ಟ
ಕಾಬೂಲ್ (ಅ. 11): ಶಿಯಾ ಮುಸ್ಲಿಮರನ್ನು ಗುರಿಯಾಗಿಸಿ ಅಷ್ಘಾನಿಸ್ತಾನದ ಕುಂದುಜ್ ನಗರದ ಮಸೀದಿಯೊಂದರ ಮೇಲೆ ಭೀಕರ ಆತ್ಮಾಹುತಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಘಟನೆ ಹಿಂದೆ ಐಸಿಸ್ ಉಗ್ರರ ಕೈವಾಡ ಶಂಕಿಸಲಾಗಿದೆ. ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲವಾದರೂ, ಅಷ್ಘಾನಿಸ್ತಾನದ ಶಿಯಾ ಮುಸ್ಲಿಮರನ್ನು ಲಾಗಾಯ್ತಿನಿಂದಲೂ ಐಸಿಸ್ ಉಗ್ರರು ಗುರಿಯಾಗಿಸಿಕೊಂಡು ಬಂದಿದ್ದಾರೆ.
2020 ರಲ್ಲೇ ತಾಲಿಬಾನ್ ಉಗ್ರರಿಗೆ ರಾಜ ಮರ್ಯಾದೆ ನೀಡಿ ಕಂಗೆಟ್ಟ ಅಮೆರಿಕಾ ರಷ್ಯಾ!
ಅಷ್ಘಾನಿಸ್ತಾನವನ್ನು ತಾಲಿಬಾನಿ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ, ಐಸಿಸ್ ಉಗ್ರರು ಹಲವು ಆತ್ಮಾಹುತಿ ದಾಳಿ ನಡೆಸಿದ್ದರಾದರೂ, ಇಷ್ಟೊಂದು ಜನರು ಸಾವನ್ನಪ್ಪಿದ ಮೊದಲ ಘಟನೆ ಇದು. ಹೀಗಾಗಿ ಈ ದಾಳಿ, ದೇಶದಲ್ಲಿ ತಾಲಿಬಾನ್ ಮತ್ತು ಐಸಿಸ್ ಉಗ್ರರ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.