ಪ್ರತ್ಯೇಕ ರಾಷ್ಟ್ರ ಕೇಳ್ತಿದ್ದಾರೆ ಹಿಂದೂಗಳು? ಬಾಂಗ್ಲಾ ನಿಮ್ಮಪ್ಪನ ಆಸ್ತಿ ಅಲ್ಲ ಅಂತಿದ್ದಾರೆ ಹೋರಾಟಗಾರರು!
ಬಾಂಗ್ಲಾದೇಶದಲ್ಲಿ ಹಿಂದೂಗಳು, ಸಾಫ್ಟ್ ಟಾರ್ಗೆಟ್ ಆಗಿದ್ದಾರಾ..? ಅವರನ್ನು ಕೆಣಕಿದರೆ.. ಹೊಡೆದರೆ.. ಅವರನ್ನ ಕೊಂದರೆ.. ಮನೆ, ದೇವಸ್ಥಾನಗಳನ್ನು ಸುಟ್ಟುಹಾಕಿದ್ರೆ.. ಅಷ್ಟೇ ಯಾಕೆ.. ಅತ್ಯಾಚಾರವನ್ನೇ ಮಾಡಿದ್ರೂ.. ಯಾರೂ ಕೇಳಲ್ಲ ಅನ್ನೋದೇ ಅವರ ಈ ಕ್ರೌರ್ಯಕ್ಕೆ ಕಾರಣವಾ..? ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಹಿಂದೂಗಳು ಜಗತ್ತಿನಾದ್ಯಂತ ಸಿಡಿದೆದ್ದು ನಿಂತಿದ್ದಾರೆ.
ಭಾರತದಲ್ಲಷ್ಟೇ ಅಲ್ಲ, ಈ ಬಾರಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯಾಕಾಂಡ, ಹಿಂಸಾಚಾರ, ಅತ್ಯಾಚಾರಗಳ ವಿರುದ್ಧ ಈ ಬಾರಿ ಹಿಂದೂಗಳು ಒಗ್ಗಟ್ಟಾಗಿ ಧ್ವನಿ ಎತ್ತಿದ್ದಾರೆ. ವಿಶ್ವಸಂಸ್ಥೆಗೂ ಹಿಂದೂಗಳ ಹೋರಾಟ ಮುಟ್ಟಿದೆ. ಆದರೆ.. ಭಾರತ ಬಿಟ್ರೆ, ಜಗತ್ತಿನ ಯಾವ ದೇಶದಲ್ಲೂ ಹಿಂದೂಗಳು ಬಹುಸಂಖ್ಯಾತರಲ್ಲ. ಅದು ಒಂದು ಹಿನ್ನಡೆನೇ ಆದ್ರೂ.. ಹೋರಾಟದ ಧ್ವನಿ ಈ ಬಾರಿ ದೊಡ್ಡ ಮಟ್ಟದಲ್ಲಿ ಕೇಳಿ ಬರ್ತಾ ಇದೆ.