Asianet Suvarna Focus ತನ್ನ ಕುಟುಂಬವನ್ನ ಬಚ್ಚಿಟ್ಟ ಪುಟಿನ್, ಸ್ಫೋಟಕ ರಹಸ್ಯ ಬಿಚ್ಚಿಟ್ಟ ರಷ್ಯಾ ಪ್ರೊಫೆಸರ್

ಇನ್ನು ಯಾವುದೇ ಸಂದರ್ಭದಲ್ಲೂ ದಾಳಿಯಾಗಬಹುದು ಎಂದು  ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇಫ್‌ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಅಂಡರ್‌ಗ್ರೌಂಡ್‌ ಸಿಟಿಗೆ ಹೋಗಿದೆ. ಸ್ಥಳ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.03): ರಷ್ಯಾ ಸೇನೆ 8 ದಿನವೂ ಉಕ್ರೇನ್​ ಮೇಲೆ ದಾಳಿ ಮುಂದುವರಿಸಿದೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆಸಿರುವ ಉಕ್ರೇನ್ ಮತ್ತು ರಷ್ಯಾ (Ukraine and Russia) ಯುದ್ಧ ನಿಲ್ಲಿಸುವ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

 ಈ ಹಿನ್ನೆಲೆಯಲ್ಲಿ ಇಂದು 2ನೇ ಸುತ್ತಿನ ಮಾತುಕತೆ ನಡೆಯಲಿದೆ. ಇದರ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಯುದ್ಧಭೂಮಿಯಲ್ಲಿ ಗೆಲುವು ಸಾಧಿಸಿದರೂ ಅದಕ್ಕೆ ಪ್ರತಿಯಾಗಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ರಷ್ಯಾ ಖಾರ್ಕಿವ್, ಕೀವ್ ಮತ್ತು ಇತರ ಉಕ್ರೇನಿಯನ್ ನಗರಗಳಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಯುದ್ಧ ಪ್ರಾರಂಭಿಸಿದೆ. ಹಾಗೇ, ರಷ್ಯಾದ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿರುವ ಉಕ್ರೇನ್ ತನ್ನ ನೆಲದಲ್ಲಿ 6,000 ರಷ್ಯನ್ನರನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಖಚಿತಪಡಿಸಿದ್ದಾರೆ.

8ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್‌ ಕಾಳಗ, ಇಲ್ಲಿದೆ ಸಾವು-ನೋವಿನ ಅಂಕಿ-ಸಂಖ್ಯೆ

ಇನ್ನು ಯಾವುದೇ ಸಂದರ್ಭದಲ್ಲೂ ದಾಳಿಯಾಗಬಹುದು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇಫ್‌ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಅಂಡರ್‌ಗ್ರೌಂಡ್‌ ಸಿಟಿಗೆ ಹೋಗಿದೆ. ಸ್ಥಳ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ...

Related Video