Asianet Suvarna News Asianet Suvarna News

ಆ ಮೂರು ವಿಚಾರಕ್ಕಾಗಿ ಭಾರತದ ವಿರುದ್ಧ ಚೀನಾ ನಿಗೂಢ ಸಂಚು?

45 ದಿನ ಐವತ್ತು ಸಾವಿರ ಸೈನಿಕರು. ನೂರಾರು ಬಿಡಾರ... LACಯಲ್ಲಿ ಮತ್ತೆ ಮುಷ್ಠಿಯುದ್ಧ. ಮತ್ತೆ ಮುಖಾಮುಖಿಯಾದವರು ಇಂಡೋ ಚೀನಾ ಸೈನಿಕರು. ಮಿತಿಮೀರಿದ್ದೇಕೆ ಡ್ರ್ಯಾಗನ್ ಚೇಷ್ಟ? ಬುದ್ಧ, ಭಾರತ, ಬ್ರಹ್ಮಪುತ್ರ ಈ ಮೂರಕ್ಕಾಗಿ ನಡೆಯುತ್ತಿದೆಯಾ ಚೀನಾದ ನಿಗೂಢ ಸಂಚು? 

ತವಾಂಗ್(ಆ.09): 45 ದಿನ ಐವತ್ತು ಸಾವಿರ ಸೈನಿಕರು. ನೂರಾರು ಬಿಡಾರ... LACಯಲ್ಲಿ ಮತ್ತೆ ಮುಷ್ಠಿಯುದ್ಧ. ಮತ್ತೆ ಮುಖಾಮುಖಿಯಾದವರು ಇಂಡೋ ಚೀನಾ ಸೈನಿಕರು. ಮಿತಿಮೀರಿದ್ದೇಕೆ ಡ್ರ್ಯಾಗನ್ ಚೇಷ್ಟ? ಬುದ್ಧ, ಭಾರತ, ಬ್ರಹ್ಮಪುತ್ರ ಈ ಮೂರಕ್ಕಾಗಿ ನಡೆಯುತ್ತಿದೆಯಾ ಚೀನಾದ ನಿಗೂಢ ಸಂಚು? 

ಹೌದು ಕಳೆದ ವಾರ ಅರುಣಾಚಲ ಪ್ರದೇಶದ(Arunachal Pradesh) ತವಾಂಗ್‌ ಜಿಲ್ಲೆಯ ಬಮ್‌ ಲಾ ಮತ್ತು ಯಾಂಗ್‌ತ್ಸೆ ಪಾಸ್‌ ನಡುವೆ ಭಾರತ ಮತ್ತು ಚೀನಾದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದಲ್ಲಿ ಈ ಘಟನೆ ನಡೆದಿದೆ. ಸುಮಾರು 200 ಚೀನಾ(China) ಯೋಧರು ಟಿಬೆಟ್‌ನಿಂದ ಭಾರತದ ಗಡಿಯೊಳಗೆ ಬಂದು ಯೋಧರು ಇಲ್ಲದಿದ್ದ ಬಂಕರ್‌ಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ.

ತಕ್ಷಣ ಅಲ್ಲಿಗೆ ತೆರಳಿದ ಭಾರತದ(India) ಯೋಧರು ಕೆಲ ಚೀನಿ ಸೈನಿಕರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ. ನಂತರ ಚೀನಾ ಯೋಧರು ಮರಳಿ ಹೋಗಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

Video Top Stories