Asianet Suvarna News Asianet Suvarna News

News Hour: ಇಸ್ರೇಲ್ ವಿರುದ್ಧ ಒಂದಾದ 57 ಮುಸ್ಲಿಂ ರಾಷ್ಟ್ರಗಳು

ಗಾಜಾ ನಿರ್ನಾಮಕ್ಕಾಗಿ ಇಸ್ರೇಲ್ ಸೇನೆ ನಿರಂತರವಾಗಿ ಏರ್ಸ್ಟ್ರೈಕ್ ನಡೆಸುತ್ತಲೇ ಇದೆ.. ನಿನ್ನೆ ಗಾಜಾದಲ್ಲಿ ಉಗ್ರರ ರಾಕೆಟ್ ಮಿಸ್ಫೈರ್ನಿಂದಾಗಿ ಆಸ್ಪತ್ರೆಗೆ ಅಪ್ಪಳಿಸಿ, 500 ಜನರನ್ನ ಬಲಿ ಪಡೆದಿದೆ. ಈ ದುರಂತದ ಬೆನ್ನಲ್ಲೇ ಇದು ಇಸ್ರೇಲ್ ಸೇನೆಯದ್ದೇ ದಾಳಿ ಎಂದು ಮುಸ್ಲಿಂ ರಾಷ್ಟಗಳು ಆರೋಪ ಮಾಡ್ತಿದ್ದು, ಇಸ್ರೇಲ್ ವಿರುದ್ಧ ಒಂದಾಗಿವೆ.
 

ಬೆಂಗಳೂರು: ಒಂದೆಡೆ ಇಸ್ರೇಲ್‌ ಗಾಜಾಕ್ಕೆ ಭೂಸೇನೆಯನ್ನು ನುಗ್ಗಿಸಲು ಪ್ರಯತ್ನ ಪಡುತ್ತಿದೆ. ಯಾವುದೇ ಕ್ಷಣದಲ್ಲಿ ಇಸ್ರೇಲ್‌ನಿಂದ ಈ ಆದೇಶ ಜಾರಿಯಾಗಬಹುದು. ಇದರ ನಡುವೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ 57 ಇಸ್ಲಾಂ ರಾಷ್ಟ್ರಗಳ ಒಐಸಿ ಒಕ್ಕೂಟದ ಸಭೆ ನಡೆಸಿದೆ. ಇರಾನ್, ಪಾಕಿಸ್ತಾನ, ಈಜಿಪ್ಟ್, ಜೋರ್ಡಾನ್ ಸೇರಿ 57 ರಾಷ್ಟ್ರಗಳು ಒಂದಾಗಿದ್ದು,  ಈ ಕೂಡಲೇ ಇಸ್ರೇಲ್ ಯುದ್ಧ ಭೂಮಿಯಿಂದ ಹೊರ ನಡೆಯಬೇಕೆಂದು ಒಮ್ಮತದ ನಿರ್ಧಾರ ಕೈಗೊಂಡಿವೆ. 

ಹಾಗೇನಾದರೂ ಇಸ್ರೇಲ್ ಗಾಜಾದಿಂದ ಹಿಂದೆ ಸರಿಯದೇ ಇದ್ದಲ್ಲಿ 57 ರಾಷ್ಟ್ರಗಳು ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ವ್ಯವಹಾರಕ್ಕೆ ಬ್ರೇಕ್ ಹಾಕಿ, ತೈಲದಿಂದ ಹಿಡಿದು ಎಲ್ಲಾ ವ್ಯವಹಾರ ಸ್ಥಗಿತಗೊಳಿಸುವ ಬೆದರಿಕೆ ಹಾಕಿವೆ.

ಗಾಜಾಕ್ಕೆ ಇಸ್ರೇಲ್‌ ನುಗ್ಗುವುದು ಶತಃಸಿದ್ಧ, ಅಮೆರಿಕದಿಂದ ಬಂತು ಶಸ್ತ್ರಸಜ್ಜಿತ ಜೀಪ್‌!

ಇನ್ನೊಂದೆಡೆ ಇಸ್ರೇಲ್‌ಗೆ ಬಂದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬೆಂಜಮಿನ್ ನೆತನ್ಯಾಹೋ ಜತೆ ಮಾತುಕತೆ ಬಳಿಕ ಜೊರ್ಡಾನ್‌ಗೆ ಹೋಗಬೇಕಿತ್ತು. ಆದ್ರೆ ಇದೇ ಆಸ್ಪತ್ರೆ ದಾಳಿ ಮುಂದಿಟ್ಟುಕೊಂಡು ಮುಸ್ಲಿಂ ರಾಷ್ಟ್ರಗಳು ಆ ಸಭೆಯನ್ನ ರದ್ದುಗೊಳಿಸಿದ್ದವು. ಅಮೆರಿಕಕ್ಕೆ ನಿರ್ಗಮನದ ಬಳಿಕ ಜೋ ಬೈಡೆನ್, ಗಾಜಾ ನಿರಾಶ್ರಿತರ ಪರವಾಗಿ ಅನುಕಂಪ ತೋರಿಸಿದ್ದು, 100 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.

Video Top Stories