ಲಿಟಲ್ ಬಾಯ್, ಫ್ಯಾಟ್ ಮ್ಯಾನ್‌ಗಿಂತಾ 24 ಪಟ್ಟು ದೊಡ್ಡ ಬಾಂಬ್! ಬಿ61-13 ರಹಸ್ಯವೇನು..? ಏನಿದರ ಉದ್ದೇಶ..?

ಈಗ ನೆನಪಾಗುತ್ತಿದೆ ಏಕೆ ವಿನಾಶಕಾರಿ ಯುಗ..?
ಅಮೆರಿಕಾ ಬತ್ತಳಿಕೆ ಸೇರುತ್ತಿದೆ ನಿಗೂಢ ಅಸ್ತ್ರ..!
ಜಗತ್ತಿನಲ್ಲೇ ಇಲ್ಲದ ಅತಿ ಭಯಂಕರ ಅಣುಬಾಂಬ್!

Share this Video
  • FB
  • Linkdin
  • Whatsapp

ಇಸ್ರೇಲ್ ದೇಶ ಹಮಾಸ್ ಉಗ್ರರ ಸಂತಿತಿಯನ್ನೇ ನಾಶ ಮಾಡೋಕೆ ಯುದ್ಧ ಸಾರಿದೆ. ಚೀನಾ(China) ದೇಶ ಆರ್ಥಿಕ ಯುದ್ಧ ಮಾಡ್ತ, ಹತ್ತಾರು ದೇಶಗಳಲ್ಲಿ ತನ್ನ ಆಶಿಪತ್ಯ ಸಾಧಿಸೋಕೆ ನೋಡ್ತಾ ಇದೆ. ನೂರಾರು ದೇಶಗಳ ಒಳಗೆಯೇ ಅಂತರ್ಯುದ್ಧ ನಡೀತಿದೆ. ಎಷ್ಟೋ ಕಡೆ ರಾಜಕೀಯ ವಿಪ್ಲವ ತಾಂಡವ ಆಡ್ತಾ ಇದ್ರೆ, ಇನ್ನೆಷ್ಟೋ ಕಡೆ ನೆರೆಹೊರೆಯ ಹಾವಳಿಗೆ ದೇಶಗಳು ರುದ್ರಭೂಮಿಯಾಗೋ ಹಂತ ತಲುಪಿದ್ದಾವೆ. ಇಡೀ ಜಗತ್ತೇ ಹೀಗೆ ಯುದ್ಧಮಯವಾಗಿರುವಾಗ, ಇನ್ನೊಂದು ಭೀತಿ ಭೂತಾಕಾರವಾಗಿ ಕಾಡೋಕೆ ಶುರುಮಾಡಿದೆ. ಆ ಭಯಕ್ಕೆ ಕಾರಣವಾಗಿರೋದು, ಅಮೆರಿಕಾದ (America) ಅದೊಂದು ನಿರ್ಣಯ. ಅಮೆರಿಕಾ(America) ಹೊಸದೊಂದು ಆಯುಧ ತಯಾರಿಸಿಕೊಳ್ಳೋಕೆ ಹೊರಟಿದೆ. ಈ ಹಿಂದೆ, ಹಿರೋಷಿಮಾ ಮೇಲೆ ಹಾಕಿದ್ದ ಲಿಟಲ್ ಬಾಯ್, ನಾಗಸಾಕಿ ಮೇಲೆ ಹಾಕಿದ್ದ ಫ್ಯಾಟ್ ಮ್ಯಾನ್, ಈ ಎರಡೂ ಅಣುಬಾಂಬುಗಳನ್ನೂ ಮೀರಿದ ಶಕ್ತಿಶಾಲಿ ನ್ಯೂಕ್ಲಿಯರ್ ಬಾಂಬ್ ತಯಾರಿಸೋಕೆ ಹೊರಟಿದೆ ಅಮೆರಿಕಾ. ಈಗ ಇಡೀ ಜಗತ್ತೇ ಇದರ ಬಗ್ಗೆ ಯೋಚಿಸೋ ಹಾಗಾಗಿದೆ. 1945ರಲ್ಲಿ ಮೊದಲ ಬಾರಿಗೆ ಅಣುಬಾಂಬ್(Nuclear Bomb) ಬಳಸಿದ್ದು ಇದೇ ಅಮೆರಿಕಾ. ಅವತ್ತು ಅಮೆರಿಕಾ ಹಾಕಿದ ಬಾಂಬಿನ ಎಫೆಕ್ಟ್ ನೋಡಿ, ಜಗತ್ತು ಯಾವ ಮಟ್ಟಕ್ಕೆ ನಡುಗಿತ್ತೋ, ಅಮೆರಿಕಾದ ಮಾತು ಕೇಳಿ, ಮತ್ತೆ ಅಂಥದ್ದೇ ಆತಂಕ ಆವರಿಸಿಕೊಳ್ಳೋ ವಾತಾವರಣ ಈಗ ಮೂಡಿದೆ.

ಇದನ್ನೂ ವೀಕ್ಷಿಸಿ: ಆರ್‌ಡಿ ಪಾಟೀಲ್‌ ಕೇಸಲ್ಲಿ ನಿರ್ಲಕ್ಷ್ಯ ವಹಿಸಿದ್ರೆ ಕ್ರಮ: ಪೊಲೀಸರಿಗೆ ಪರಂ ವಾರ್ನಿಂಗ್

Related Video