ಒಂದೊತ್ತಿನ ಊಟಕ್ಕೂ ಹಾಹಾಕಾರ, ಖಜಾನೆಯಲ್ಲಿ ಹಣವಿಲ್ಲ; ಅಫ್ಘಾನ್ ನಾಗರೀಕರ ಸ್ಥಿತಿ ಹರೋಹರ!

ಅಫ್ಘಾನಿಸ್ತಾನದಲ್ಲಿ ಗನ್, ಬಾಂಬ್‌ಗಳ ಸದ್ದಿಗೆ ಬೆಚ್ಚಿ ಬೀಳುತ್ತಿದ್ದ ಜನ ಈಗ ಹಸಿವಿನಿಂದ ಕಂಗೆಟ್ಟು ಹೋಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಎಲ್ಲವೂ ಅವ್ಯವಸ್ಥಿತವಾಗಿದೆ. 

First Published Sep 16, 2021, 5:01 PM IST | Last Updated Sep 16, 2021, 5:01 PM IST

ಕಾಬೂಲ್ (ಸೆ. 16): ಅಫ್ಘಾನಿಸ್ತಾನದಲ್ಲಿ ಗನ್, ಬಾಂಬ್‌ಗಳ ಸದ್ದಿಗೆ ಬೆಚ್ಚಿ ಬೀಳುತ್ತಿದ್ದ ಜನ ಈಗ ಹಸಿವಿನಿಂದ ಕಂಗೆಟ್ಟು ಹೋಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಎಲ್ಲವೂ ಅವ್ಯವಸ್ಥಿತವಾಗಿದೆ.

ಬಡತನ, ಬೆಲೆ ಏರಿಕೆ, ಅನ್ನಕ್ಕಾಗಿ ಹಾಹಾಕಾರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದನ್ನು ನಿಭಾಯಿಯೋಕೆ ತಾಲಿಬಾನಿಗಳಿಂದ ಆಗುತ್ತಿಲ್ಲ. ಯಾಕಂದರೆ ಸರ್ಕಾರಿ ಖಜಾನೆ ಖಾಲಿ ಖಾಲಿಯಾಗಿದೆ. ಬೊಕ್ಕಸದಲ್ಲಿ ಹಣವಿಲ್ಲ, ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ, ಆಡಳಿತ ನಡೆಸುವ ಸವಾಲು ತಾಲಿಬಾನಿಗಳ ಎದುರಿದೆ. ಆದರೆ ನಿಜವಾಗಿ ತೊಂದರೆ ಅನುಭವಿಸುವವರು ಅವರಲ್ಲ,  ಅಲ್ಲಿನ ನಾಗರೀಕರು. ಅವರ ಸ್ಥಿತಿ, ಪರದಾಟ ಯಾರಿಗೂ ಬೇಡ. ಹೇಗಿದೆ ಅಲ್ಲಿನ ಆರ್ಥಿಕ ಸ್ಥಿತಿ, ನಾಗರೀಕರ ಜೀವನ..? ಇಲ್ಲಿದೆ ಸ್ಪೆಷಲ್ ರಿಪೋರ್ಟ್.