Asianet Suvarna News Asianet Suvarna News

ಒಂದೆಡೆ ಶಾಂತಿ ಮಂತ್ರ, ಇನ್ನೊಂದೆಡೆ ಭೀಕರ ದಾಳಿ ತಾಲಿಬಾನ್‌ ರೌದ್ರಾವತಾರ ಶುರು!

ನಮ್ಮ ಹೊಸ ಆಡಳಿತ ಶಾಂತಿಯುತವಾಗಿರಲಿದೆ, ನಾವು ಮಹಿಳೆಯರ ಮೇಲೆ ದಾಳಿ ನಡೆಸಲ್ಲ, ದೇಶದ ಎಲ್ಲಾ ಪ್ರಜೆಗಳಿಗೂ ಕ್ಷಮಾದಾನ ನೀಡಿದ್ದೇವೆ ಎಂದೆಲ್ಲಾ ಹೇಳಿಕೊಂಡಿದ್ದ ಅಷ್ಘಾನಿಸ್ತಾನದ ತಾಲಿಬಾನಿ ಉಗ್ರರು, ಇದೀಗ ಹಿಂಸಾಚಾರದ ತಮ್ಮ ಹಳೆಯ ಚಾಳಿ ಪುನಾರಂಭಿಸಿದ್ದಾರೆ. ದೇಶದಲ್ಲಿ ಅಧಿಕಾರಕ್ಕೆ ಬರುವ ಮೊದಲೇ, ತಾಲಿಬಾನ್‌-ವಿರೋಧಿ ಪ್ರತಿಭಟನೆ ಹತ್ತಿಕ್ಕುವ ಯತ್ನ ಆರಂಭಿಸಿದ್ದಾರೆ.

ಕಾಬೂಲ್(ಆ.19) ನಮ್ಮ ಹೊಸ ಆಡಳಿತ ಶಾಂತಿಯುತವಾಗಿರಲಿದೆ, ನಾವು ಮಹಿಳೆಯರ ಮೇಲೆ ದಾಳಿ ನಡೆಸಲ್ಲ, ದೇಶದ ಎಲ್ಲಾ ಪ್ರಜೆಗಳಿಗೂ ಕ್ಷಮಾದಾನ ನೀಡಿದ್ದೇವೆ ಎಂದೆಲ್ಲಾ ಹೇಳಿಕೊಂಡಿದ್ದ ಅಷ್ಘಾನಿಸ್ತಾನದ ತಾಲಿಬಾನಿ ಉಗ್ರರು, ಇದೀಗ ಹಿಂಸಾಚಾರದ ತಮ್ಮ ಹಳೆಯ ಚಾಳಿ ಪುನಾರಂಭಿಸಿದ್ದಾರೆ. ದೇಶದಲ್ಲಿ ಅಧಿಕಾರಕ್ಕೆ ಬರುವ ಮೊದಲೇ, ತಾಲಿಬಾನ್‌-ವಿರೋಧಿ ಪ್ರತಿಭಟನೆ ಹತ್ತಿಕ್ಕುವ ಯತ್ನ ಆರಂಭಿಸಿದ್ದಾರೆ.

ಇಂಥ ಯತ್ನದ ವೇಳೆ ಮೂವರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಪ್ರಾಣಭೀತಿಯಿಂದ ದೇಶ ತೊರೆಯಲು ಮುಂದಾಗಿದ್ದ ಮಹಿಳೆಯರು, ಮಕ್ಕಳ ಮೇಲೂ ಮಾರಕ ದಾಳಿ ನಡೆಸಿದ್ದಾರೆ.

ಮತ್ತೊಂದೆಡೆ ಮನರಂಜನಾ ಸೇವೆಗಳನ್ನು ಬಹುವಾಗಿ ದ್ವೇಷಿಸುವ ಉಗ್ರರು ಅಮ್ಯೂಸ್‌ಮೆಂಟ್‌ ಪಾರ್ಕ್ಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ನಡೆದಿದೆ. ಅಷ್ಟುಸಾಲದೆಂಬಂತೆ ತಾಲಿಬಾನಿ ಆಕ್ರಮಣವನ್ನು ಕಡೆಯ ಹಂತದವರೆಗೂ ಎದೆಗುಂದದೇ ಎದುರಿಸಿದ್ದ ಜಿಲ್ಲಾ ಮಹಿಳಾ ಗವರ್ನರ್‌ ಒಬ್ಬರನ್ನು ಬಂಧಿಸಿದ್ದಾರೆ. ಈ ಎಲ್ಲಾ ಘಟನೆಗಳು ತಾಲಿಬಾನಿಗಳು ಮಂಗಳವಾರ ಪಠಿಸಿದ ಮಂತ್ರ ಕೇವಲ ತೋರಿಕೆಗಾಗಿರಬಹುದು ಎಂಬ ಸಂಶಯವನ್ನು ದೃಢಪಡಿಸಿವೆ.