
ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
ಜಗತ್ತನ್ನೇ ಬೆಚ್ಚಿಬೀಳಿಸಿರುವ ಎಪ್ಸ್ಟೀನ್ ಫೈಲ್ಸ್, ಹಣ ಮತ್ತು ಅಧಿಕಾರದ ಮದದಿಂದ ಮನುಷ್ಯ ಎಷ್ಟು ಕೆಳಗೆ ಜಾರಬಲ್ಲ ಎಂಬುದನ್ನು ತೋರಿಸುತ್ತದೆ. ಈ ಸ್ಫೋಟಕ ಪ್ರಕರಣವು ವಿಶ್ವದ ಗಣ್ಯರ ಮುಖವಾಡಗಳನ್ನು ಕಳಚಿದ್ದು, ಭಾರತಕ್ಕೂ ಇದರ ನಂಟಿದೆ ಎಂಬ ಆಘಾತಕಾರಿ ವಿಚಾರ ಹೊರಬಂದಿದ್ದು, ಇಲ್ಲಿದೆ ಡಿಟೇಲ್ ಸ್ಟೋರಿ..
ನಮಸ್ತೆ ವೀಕ್ಷಕರೇ.. ನಾವಿವತ್ತು ನಿಮಗೆ ಹೇಳ್ತಾ ಇರೋ ಕತೆ ಇದ್ಯಲ್ಲಾ, ಅದು ನಿಜಕ್ಕೂ ಬೆಚ್ಚಿಬೀಳಿಸುವಂಥದ್ದು.. ಇದನ್ನ ಕೇಳಿದ್ರೆ, ಭಯವಾಗೋದಕ್ಕಿಂತಾ ಹೆಚ್ಚಾಗಿ, ನಮ್ಮ ಸುತ್ತಲೂ ಇರೋ ಜಗತ್ತಲ್ಲಿ ಇಷ್ಟೆಲ್ಲಾ ನಡೀತಿದ್ಯಾ ಅಂತ ಆಘಾತ-ಆಶ್ಚರ್ಯ ಎರಡೂ ಆಗುತ್ತೆ.. ಪ್ರಪಂಚದಲ್ಲಿ ದುಡ್ಡಿದ್ದರೆ ಏನು ಬೇಕಾದರೂ ಮಾಡಬೋದು ಅಂತಾರೆ.. ಆದರೆ ಆ ದುಡ್ಡು ಮತ್ತು ಅಧಿಕಾರದ ಮದ ನೆತ್ತಿಗೇರಿದರೆ ಮನುಷ್ಯ ಎಷ್ಟರ ಮಟ್ಟಿಗೆ ಕೆಳಜಾರಬಹುದು ಅನ್ನೋದಕ್ಕೆ ಇಲ್ಲೊಂದು ಬೆಚ್ಚಿಬೀಳಿಸೋ ಉದಾಹರಣೆಯಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಇಡೀ ಪ್ರಪಂಚದ ದೊಡ್ಡ ದೊಡ್ಡ ವ್ಯಕ್ತಿಗಳ ಮುಖವಾಡ ಕಳಚೋ ಸ್ಫೋಟಕ ಪ್ರಕರಣ.. ಈ ಕತೆ ಭಾರತಕ್ಕೂ ಕನೆಕ್ಟ್ ಆಗಿದೆ ಅನ್ನೋದು ಮತ್ತೊಂದು ಆಘಾತ.. ಇದೆಲ್ಲದರ ಅಸಲಿ ಕತೆ ಏನು? ಒಂದೊಂದಾಗೇ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ..
ಜಗತ್ತನ್ನೇ ಬೆಚ್ಚಿಬೀಳೋ ಹಾಗೆ ಮಾಡಿರೋ ಈ ಎಪ್ಸ್ಟೀನ್ ಫೈಲ್ಗಳಲ್ಲಿ, ಭಾರತದ ರಹಸ್ಯವೂ ಅಡಗಿದೆ ಅಂತಿದ್ದಾರೆ.. ಇದರ ಹಿಂದಿರೋ ಅಸಲಿಯತ್ತೇನು? ಭಾರತಕ್ಕೂ ಆ ಕರಾಳ ದ್ವೀಪಕ್ಕೂ ಇರೋ ಕನೆಕ್ಷನ್ನ ಕತೆ ಏನು? ಎಪ್ಸ್ಟೀನ್ ಫೈಲ್ಸ್ ಜಗತ್ತಿನ ಮೂಲೆಮೂಲೆಲೂ ಸಂಚಲನ ಸೃಷ್ಟಿಸಿದೆ.. ಅದಕ್ಕೆ ಕಾರಣ, ಕರಾಳ ಕೋಟೆ ಕಟ್ಟಿದ ಕಾಮುಕನೊಬ್ಬ ಬಚ್ಚಿಟ್ಟಿದ್ದ ರಹಸ್ಯಗಳು ಈಗ ಬಯಲಿಗೆ ಬಿದ್ದಿವೆ.. ಅದರಲ್ಲಿ ಹಲವು ಗಣ್ಯರ ಹೆಸರೂ ಇದೆ. ಎಪ್ಸ್ಟೀನ್ ಫೈಲ್ಸ್ ಅನ್ನೋದು, ಜಗತ್ತಿನ ಯಾವ ಕ್ರೈಮ್ ಜಗತ್ತೂ ನೋಡದಂಥಾ ಅತಿ ಭಯಾನಕ ರಹಸ್ಯ.. ಆದ್ರೆ ಈಗ ಅದಾಗದೇ ಹೊರ ಜಗತ್ತಿಗೆ ಗೋಚರವಾಗೋಕೆ ಹೊರಟಿದೆ.. ಅದಕ್ಕೆ ಭಾರತದವರ ಕನೆಕ್ಷನ್ನೂ ಇದೆ ಅಂತಿದ್ದಾರೆ... ಅದರಿಂದ ಆಗ್ತಾ ಇರೋ ಕೋಲಾಹಲ ಏನು ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.