ಏಕಾಏಕಿ ಕುಸಿದ ಬಿದ್ದ ಮೂರಂತಸ್ತಿನ ಮಾಲ್: ಭಯಂಕರ ದೃಶ್ಯದ ವಿಡಿಯೋ ವೈರಲ್
ಕಟ್ಟಡ ಕುಸಿತದ ವಿಡಿಯೋವೊಂದು ವೈರಲ್ ಆಗಿದೆ. 2018 ರ ಹಳೆಯ ವಿಡಿಯೋ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಕಾಏಕಿ ದೊಡ್ಡ ದೊಡ್ಡ ಕಟ್ಟಡಗಳು ಕುಸಿದು ಬೀಳುವ ಹಲವು ದೃಶ್ಯಗಳನ್ನು ನೋಡಿರಬಹುದು. ಅಂತಹ ದೃಶ್ಯಗಳು ಕ್ಯಾಮರಾಗಳಲ್ಲಿ ಮೊಬೈಲ್ ಫೋನ್‌ಗಳಲ್ಲಿ ಸೆರೆಯಾಗಿ ಬಳಿಕ ವೈರಲ್ ಆಗಿವೆ. ಅದೇ ರೀತಿ ಈಗ ಕಟ್ಟಡ ಕುಸಿತದ ವಿಡಿಯೋವೊಂದು ವೈರಲ್ ಆಗಿದೆ. 2018 ರ ಹಳೆಯ ವಿಡಿಯೋ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂರು ಅಂತಸ್ತಿನ ಮಾಲ್ ಒಂದರ ಕಟ್ಟಡ ಏಕಾಏಕಿ ಕುಸಿದು ಬಿದ್ದಿತ್ತು. ಈ ಭಯಂಕರ ದೃಶ್ಯ ಒಂದು ಕ್ಷಣ ಎದೆ ನಡುಗಿಸುತ್ತಿದೆ. ಮೆಕ್ಸಿಕೋದಲ್ಲಿ ನಡೆದ ಘಟನೆ ಇದಾಗಿದೆ. 2018ರಲ್ಲಿ ಅಲ್ಲಿನ ಮಾಲ್ ಒಂದರ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ