Asianet Suvarna News Asianet Suvarna News

ಏಡ್ಸ್ ಮಕ್ಕಳಿಗೆ ತಾಯಿಯ ಆರೈಕೆ: ತಬಸ್ಸುಮ್'ಗಿರಲಿ ನಿಮ್ಮೆಲರ ಹಾರೈಕೆ

ಏಡ್ಸ್ ಬಗ್ಗೆ ಜಾಗೃತಿಗೊಳ್ಳಲು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಸರಕಾರ ಹಲವು ಕ್ರಮಗಳನ್ನು ಕೈಗೊಂಡು ಅದರ ನಿರ್ಮೂಲನೆಗೆ ಯೋಜನೆ ಹಾಕಿದೆ. ಆದರೆ ಇಲ್ಲಿ ವಿವರಿಸುವ ಸ್ನೇಹದೀಪದ ಕಥೆ ವಿಶ್ವ ಏಡ್ಸ್ ದಿನವನ್ನು ಅಣಕಿಸುತ್ತಿದೆ.

First Published Dec 5, 2019, 4:41 PM IST | Last Updated Dec 5, 2019, 4:41 PM IST

ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಏಡ್ಸ್ ಬಗ್ಗೆ ಜಾಗೃತಿಗೊಳ್ಳಲು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಸರಕಾರ ಹಲವು ಕ್ರಮಗಳನ್ನು ಕೈಗೊಂಡು ಅದರ ನಿರ್ಮೂಲನೆಗೆ ಯೋಜನೆ ಹಾಕಿದೆ. ಆದರೆ ಇಲ್ಲಿ ವಿವರಿಸುವ ಸ್ನೇಹದೀಪದ ಕಥೆ ವಿಶ್ವ ಏಡ್ಸ್ ದಿನವನ್ನು ಅಣಕಿಸುತ್ತಿದೆ.
ಹೌದು... ತಬಸ್ಸುಮ್ ಮಂಗಳೂರು ಸಮೀಪದ ಕೋಣಾಜೆಯ ಮಧ್ಯಮ ಕುಟುಂಬದ 34ರ ಹರೆಯದ ಪ್ರತಿಭಾವಂತ ಪದವೀಧರ ಮುಸ್ಲಿಂ ಮಹಿಳೆ. ಗಂಡ, ಇಬ್ಬರು ಮಕ್ಕಳಿದ್ದಾರೆ. ತಂದೆ, ತಾಯಿ, ಸಹೋದರ, ಸಹೋದರಿಯರೂ ಇದ್ದಾರೆ. ಆಕೆಗೆ ಮನೆ-ಮಕ್ಕಳು ಅಂತ ಗೃಹಿಣಿಯಾಗಿ ಸಂಸಾರ ನೋಡಿಕೊಳ್ಳುತ್ತಾ ಬದುಕಬಹುದಿತ್ತು. ಅಥವಾ ಒಂದೊಳ್ಳೆಯ ವೃತ್ತಿ ಅರಸಿ ಸಂಪಾದನೆಯ ಮಾರ್ಗ ಹಿಡಿಯಬಹುದಿತ್ತು. ಆದರೆ ಆಕೆಯ ದೃಷ್ಟಿಕೋನವೇ ಬೇರೆ. ಆಕೆ ಕೆಲವು ವರ್ಷಗಳ ಹಿಂದೆ ತೆಗೆದುಕೊಂಡ ಒಂದು ಮಹತ್ತರ ನಿರ್ಧಾರದಿಂದಾಗಿ ಇಂದು ಬೀದಿಪಾಲಾಗಿ ಮಾರಕರೋಗದಿಂದ ಸಾವಿನ ಕದತಟ್ಟಿರುವ 25 ಹೆಣ್ಮಕ್ಕಳು ಸಂತೋಷದಿಂದ ಜೀವನ ಸಾಗಿಸುವಂತಾಗಿದೆ. ಯಾವುದೇ ಚಿಂತೆಯಿಲ್ಲದೆ ನಲಿದಾಡುತ್ತಿದ್ದಾರೆ.
ಹಾಗಾದರೆ ಏನ್ ಆ ಸ್ಟೋರಿ..ನಾವು ಹೇಳ ಹೊರಟಿರುವುದು ಯಾರರಬಗ್ಗೆ ನೋಡೋಣ  ಈ ವೀಡಿಯೋದಲ್ಲಿ.
 

Video Top Stories