
ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!
ನಾವು ಮಹಿಳೆಯರ ಕಣ್ಣಲ್ಲಿ ಒಂದು ಹನಿ ಕಣ್ಣೀರನ್ನೂ ಬೀಳಲು ಬಿಡಬಾರದು. ಮಹಿಳೆಯರ ಉಪಸ್ಥಿತಿಯಿಂದಲೇ ಪರಿಸರವು ಸಂತುಷ್ಟಿಯಾಗುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಹೇಳಿದರು.
ಬೆಂಗಳೂರು (ಫೆ.14): ನಾವು ಮಹಿಳೆಯರ ಕಣ್ಣಲ್ಲಿ ಒಂದು ಹನಿ ಕಣ್ಣೀರನ್ನೂ ಬೀಳಲು ಬಿಡಬಾರದು. ಮಹಿಳೆಯರ ಉಪಸ್ಥಿತಿಯಿಂದಲೇ ಪರಿಸರವು ಸಂತುಷ್ಟಿಯಾಗುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಹೇಳಿದರು. ಮಹಿಳೆಯರ ಭಾವನೆಗಳು ಒಂದು ಆಶೀರ್ವಾದವಾಗಿದ್ದು, ಅವರು ಇದರಿಂದ ಸಮಾಜವನ್ನು ಒಗ್ಗೂಡಿಸುತ್ತಾರೆ. ಮಹಿಳೆಯರು ಪ್ರಮುಖ ರಾಷ್ಟ್ರಗಳಲ್ಲಿ ನಾಯಕರಾಗಿದ್ದರೆ, ಜಗತ್ತಿನಲ್ಲಿ ನಡೆಯುವ ಸಂಘರ್ಷಗಳು, ಯುದ್ಧಗಳು ಮತ್ತು ಸಾಮಾಜಿಕ ಅಸ್ಥಿರತೆಗಳು ಕಡಿಮೆಯಾಗಬಹುದು ಎಂದು ಹೇಳಿದರು. ಭಾರತದ ಮಹಿಳಾ ಸಬಲಿಕರಣದ ಬಗ್ಗೆ ಮಾತನಾಡುತ್ತ, ಅವರು ದೇವತೆಗಳ ಪಾತ್ರವನ್ನು ರಕ್ಷಣಾ ಸಚಿವಾಲಯ - ದುರ್ಗಾ, ಆರ್ಥಿಕ ಸಚಿವಾಲಯ - ಲಕ್ಷ್ಮಿ ಹಾಗೂ ಶಿಕ್ಷಣ ಸಚಿವಾಲಯ - ಸರಸ್ವತಿಗೆ ಹೋಲಿಸಿದರು.