Asianet Suvarna News Asianet Suvarna News

3 ತಿಂಗಳಲ್ಲಿ 22000 ಕಿ.ಮೀ ಸಂಚಾರ, ದೇಶ ಪರ್ಯಟನೆ ಮಾಡಿರುವ ಅಮೃತ ಜೋಶಿ!

3 ತಿಂಗಳಲ್ಲಿ ದೇಶ ಪರ್ಯಟನೆ ಮಾಡಿರುವ ಅಮೃತ ಜೋಶಿ,  ಈ ಅವಧಿಯಲ್ಲಿ 22000 ಕಿಲೋಮೀಟರ್‌ ದೇಶ ಪರ್ಯಟನೆ ಮಾಡಿದ್ದಾರೆ. ಏಕಾಂಗಿಯಾಗಿ ದೇಶ ಸುತ್ತಿಬಂದು ಬೆಂಗಳೂರಿಗೆ ವಾಪಸಾಗಿರುವ ಅಮೃತ, ಇತ್ತೀಚೆಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿದ್ದಾರೆ.
 

Aug 5, 2022, 4:06 PM IST

ಬೆಂಗಳೂರು (ಆ. 5): ಮೂರು ತಿಂಗಳ ಅವಧಿಯಲ್ಲಿ ಏಕಾಂಗಿಯಾಗಿ 22 ಸಾವಿರ ಕಿಲೋಮೀಟರ್‌ ದೇಶ ಪರ್ಯಟನೆಯ ಸಾಹಸ ಮಾಡಿರುವ ಅಮೃತ ಜೋಶಿ, ಇತ್ತೀಚೆಗೆ ಬೆಂಗಳೂರಿಗೆ ವಾಪಸಾದರು. ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. 

ಈ ವೇಳೆ ಮಾತನಾಡಿದ ಅವರು,  ನಾನು 12 ನೇ ವರ್ಷಕ್ಕೆ ಬೈಕ್ ಕಲಿತಿದ್ದೆ. ಸಹಜವಾಗಿ ಹುಡುಗಿಯರು ಅಂದ್ರೆ ರೆಸ್ಟ್ರಿಕ್ಷನ್ ಇರುತ್ತೆ. ಆದರೆ, ನನ್ನ ತಂದೆಗೆ ಮಗಳು ಬೈಕ್‌ ಓಡಿಸಬೇಕು ಅನ್ನೋ ಕನಸಿತ್ತು. ಅವರ ಆಸೆಯಂತೆ ನಾನು ಮುಂದುವರಿದೆ. ಅವರಿಗೆ ನಾನು ಬೈಕ್ ನಲ್ಲಿ ಸುತ್ತಬೇಕು ಅನ್ನೋ ಆಸೆಗಳಿತ್ತು. 2 ವರ್ಷದ ಹಿಂದೆ ಅವರು ತೀರಿಕೊಂಡರು. ಅವರ ಆಸೆ ಪೂರೈಸಲಿ ಅಂತ ದೇಶ ಪರ್ಯಟನೆ ಮಾಡಿದ್ದೇನೆ ನನ್ನ ತಂದೆ ಈಗ ಇಲ್ಲದಿದ್ದರೂ, ಅವರ ಆಸೆ ಪೂರೈಸಿದ್ದೇನೆ ಅನ್ನೋ ಧನ್ಯತಾ ಭಾವವಿದೆ. ನನಗೆ ಚಿಕ್ಕವಳಿದ್ದಾಗಿನಿಂದಲೂ ಮೇಘಾಲಯ ನೋಡಬೇಕು ಅಂತ ಆಸೆ ಇತ್ತು. ಅದನ್ನು ಈಗ ಪೂರೈಸಿದ್ದೇನೆ ಎಂದು ಹೇಳಿದ್ದಾರೆ.

ಆರು ಕಿಮೀ ನಡೆದೇ ಹೋಗಿ ಪುಸ್ತಕ ವಿತರಣೆ; ಗ್ರಂಥಪಾಲಕಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ನಾನು ಬಾಂಗ್ಲಾ ಬಾರ್ಡರ್ ಗೆ ಹೋದಾಗ ನಮ್ಮ ಸೈನಿಕರು ಸಾಕಷ್ಟು ಸಹಾಯ ಮಾಡಿದರು. ಅಲ್ಲಿ ಮಾತ್ರವಲ್ಲ ನೇಪಾಳ ಗಡಿಯಲ್ಲೂ ನಮಗೆ ಸಹಾಯ ಸಿಕ್ಕಿತು. ನಾನು ಮಾಡಿದ ಈ ಕಾರ್ಯಕ್ಕೆ ನನ್ನನ್ನ ಗುರುತಿಸಿ ಇಂದು ಸನ್ಮಾನ ಮಾಡಿರೋದು ತುಂಬಾ ಖುಷಿ ಸಿಕ್ಕಿದೆ. ಮಾರ್ಗ ಮಧ್ಯೆ ಅಪಘಾತ ಆದ ಕಾರಣ 1 ತಿಂಗಳು ಮನೆಯಲ್ಲಿ ರೆಸ್ಟ್‌ ಮಾಡಿದ್ದೆ. ಆ ಬಳಿಕ ಮತ್ತೆ ಪರ್ಯಟನೆ ಆರಂಭಿಸಿದೆ ಎಂದು ಹೇಳಿದ್ದಾರೆ.

Video Top Stories