Asianet Suvarna News Asianet Suvarna News

Digital Wallet ಬಳಕೆದಾರರೇ ಎಚ್ಚರ : ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ!

*ಯಾರಾದರೂ ಹಣ ಕಳಿಸಿದ್ದು ಯಶಸ್ವಿಯಾಗಿದೆ  ಸ್ಕ್ರೀನ್‌ ತೋರಿಸಿದ್ರೆ ನಂಬಬೇಡಿ. 
*ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಮೊದಲು ಖಾತ್ರಿಪಡಿಸಿಕೊಳ್ಳಿ. 
*ಇಲ್ಲದಿದ್ದರೆ ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ!
*ಮೋಸದ ಆ್ಯಪ್‌ಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದರ ವಿಡಿಯೋ ವೈರಲ್ 

ಬೆಂಗಳೂರು(ನ.12): ಪ್ರಪಂಚದಾದ್ಯಂತ ತಂತ್ರಜ್ಞಾನದ (Technology) ಬೆಳವಣಿಗೆಯಾಗುತ್ತಿದ್ದಂತೆಯೇ ತಂತ್ರಜ್ಞಾನ ಬಳಸಿ ಜನರಿಗೆ ಮೋಸ (Fraud) ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.  ಪೇಟಿಎಂ, ಗೂಗಲ್‌ ಪೇ, ಫೋನ್‌ಪೆ ಮೂಲಕ ಹಣ ಎಗರಿಸುವ ದೊಡ್ಡ ಮೋಸದ ಜಾಲ ಈಗ ಚಾಲ್ತಿಯಲ್ಲಿದೆ. ಇತ್ತೀಚಿಗಿನ ದಿನಗಳಲ್ಲಿ ಮೋಸ ಮಾಡಲೆಂದೇ  ಪ್ರ್ಯಾಂಕ್‌ ಪೇಮೆಂಟ್‌  ಆ್ಯಪ್‌ಗಳನ್ನು (Prank Payment App) ಅಭಿವೃದ್ಧಿಪಡಿಸಲಾಗಿದೆ. ಇಂತಹದ್ದೇ ಫೇಕ್‌ ಆ್ಯಪ್‌ ಬಳಸುವ ಮೂಲಕ ಹಣ ಪಡೆಯುವವರಿಗೆ ಮೋಸ ಮಾಡಬಹುದಾದ ಆ್ಯಪ್‌ ಹೇಗೆ ಕೆಲಸ ಮಾಡುತ್ತಿದೆ ಎಂದು ಬಹಿರಂಗಪಡಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Bitcoin Scam Exclusive: ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್, IPS ಅಧಿಕಾರಿಯ ಆಡಿಯೋ ಲೀಕ್!

ಅಂಗಡಿಗಳಲ್ಲಿ ಅಥವಾ ಬೇರೊಬ್ಬರಿಂದ  ಹಣ ಪಡೆಯುವಾಗ ಹಣ ಕಳಿಸಿದ್ದು ಯಶಸ್ವಿಯಾಗಿದೆ ಎಂದು ಸ್ಕ್ರೀನ್‌ (scree) ತೋರಿಸಿದ್ರೆ ನಂಬಬೇಡಿ. ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಮೊದಲು ಖಾತ್ರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ. ಇಂಥಹ ಮೊಸದ  ಆ್ಯಪ್‌ಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದರ ವಿಡಿಯೋ ಈ ವೈರಲ್‌ ಆಗಿದೆ. ಭಾರತದಲ್ಲಿ ಡಿಜಿಟಿಲ್‌ ಪೇಮೆಂಟ್‌ ಹಾವಳಿ ಜೋರಾಗಿಯೇ ಇದೆ. ಜನರು ನಗದು ರೂಪದ ಹಣದ ಬಳಕೆ ಬದಲಾಗಿ ಡಿಜಿಟಲ್‌ ವಾಲೆಟ್‌ಗಳ (Digital wallet) ಮೊರೆ ಹೋಗಿದ್ದಾರೆ. ಹಾಗಾಗಿ  ಡಿಜಿಟಲ್‌ ಪೇಮೆಂಟ್‌ಗಳ ಮೂಲಕ ಹಣ ಸಂದಾಯ ಮಾಡುವಾಗ ಸ್ವಲ್ಪ ಯಾಮಾರಿದ್ರೂ ಇಂತಹ ಮೋಸದ ಜಾಲಕ್ಕೆ ಸಿಲುಕಿಕೊಳ್ಳುವುದು ಶತ ಸಿದ್ಧ!

Video Top Stories