Asianet Suvarna News Asianet Suvarna News

Weekly-Horoscope: ಈ ರಾಶಿಯವರಿಗೆ ಆಪ್ತರು ದೂರವಾಗುತ್ತಾರೆ..ಎಚ್ಚರದಿಂದ ಇರಿ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರ ಸೋಮವಾರದಿಂದ ಶನಿವಾರದವರೆಗೆ ಚಂದ್ರ ಧನಸ್ಸು ರಾಶಿಯಿಂದ ಕುಂಭ ರಾಶಿವರೆಗೆ ಸಂಚಾರ ಮಾಡುತ್ತಾನೆ. ಮೇ.1ರಿಂದ ಗುರು ಪರಿವರ್ತನೆ ಇದೆ. ಧನಸ್ಸು ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ತಂದೆ-ಮಕ್ಕಳಲ್ಲಿ ಮನಸ್ತಾಪ ಧರ್ಮ ಕಾರ್ಯಗಳಿಗೆ ತೊಡಕು, ಸಹೋದರರ ಸಹಕಾರ, ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ವಾರದ ಮಧ್ಯದಲ್ಲಿ ಕುಟುಂಬ ಸಹಕಾರ ಹಣಕಾಸಿನ ವ್ಯತ್ಯಾಸವಿರಲಿದೆ. ಸೋಲು ಸಂಭವಿಸಲಿದೆ. ದಾಂಪತ್ಯದಲ್ಲಿ ಕಲಹ ಉಂಟಾಗಲಿದೆ. ವಾರಾಂತ್ಯದಲ್ಲಿ ಸಹೋದರರಲ್ಲಿ ಮನಸ್ತಾಪ ಸಾಲ ಬಾಧೆ, ದೇಹಕ್ಕೆ ಪೆಟ್ಟುಬೀಳಲಿದೆ, ವೃತ್ತಿಯಲ್ಲಿ ಅಸಮಾಧಾನವಿರಲಿದೆ. ಪರಿಹಾರಕ್ಕೆ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ.

ಇದನ್ನೂ ವೀಕ್ಷಿಸಿ:  Watch Video: ಶಿವಮೊಗ್ಗ ಅಖಾಡದಲ್ಲಿ ತ್ರಿಮೂರ್ತಿಗಳ ಕಾದಾಟ! ಹ್ಯಾಟ್ರಿಕ್ ಗೆಲುವು ಸಾಧಿಸ್ತಾರಾ ರಾಘವೇಂದ್ರ?