ಜೆಡಿಎಸ್‌ನಿಂದಲೇ ಆಪರೇಷನ್ ಬಿಜೆಪಿ! ಪೊಲೀಸರ ಮುಂದೆಯೇ ಹೊಡೆದಾಡಿಕೊಂಡ ಮೈತ್ರಿ ಕಾರ್ಯಕರ್ತರು!
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪೊಲೀಸರ ಮುಂದೆಯೇ ಹೊಡೆದಾಡಿಕೊಂಡಿದ್ದಾರೆ. ಜೇವರ್ಗಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಬಿಜೆಪಿಯ ಏಳು ಸದಸ್ಯರನ್ನು ಜೆಡಿಎಸ್ ಆಪರೇಷನ್ ಮಾಡಿದೆ. ಒಂದು ಮತದಿಂದ ಜೆಡಿಎಸ್ ಅಧಿಕಾರಕ್ಕೆ ಏರಿದೆ. ಈ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.