
ಇಸ್ರೇಲ್-ಹಮಾಸ್ ಕದನ ವಿರಾಮ: ಯುದ್ಧದ ಅಂತ್ಯವಲ್ಲ, ವಿರಾಮ!
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಕದನ ವಿರಾಮಕ್ಕೆ ಕಾರಣವಾಗಿದೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಆದರೆ ಇದು ಅಂತ್ಯವಲ್ಲ, ಕೇವಲ ವಿರಾಮ. ಈ ಕದನ ವಿರಾಮದ ಹಿಂದಿನ ನಿಜವಾದ ಕಥೆ ಏನು?
ಇಸ್ರೇಲ್ ಹಾಗೂ ಗಾಜಾ ಪಟ್ಟಿಯ ಉಗ್ರರ ನಡುವೆ ಶುರುವಾಗಿದ್ದ ಯುದ್ಧ, ಈಗ ಮುಕ್ತಾಯದ ಕಡೆ ಹೊರಟಂತೆ ಕಾಣ್ತಾ ಇದೆ.. ಎರಡೂ ಕಡೆಯವರು ಈಗ ಕದನ ವಿರಾಮ ಘೋಷಿಸೋಕೆ ಮುಂದಾಗಿದಾರೆ.. ಅದರ ಪರಿಣಾಮವಾಗಿ, ಉಗ್ರರು ಮೂರು ಮಂದಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ್ರು.. ಅದಕ್ಕೆ ಪ್ರತಿಯಾಗಿ ಇಸ್ರೇಲ್ 90 ಮಂದಿ ಪ್ಯಾಲೆಸ್ತೇನಿ ಖೈದಿಗಳನ್ನ ಬಿಟ್ಟು ಕಳಿಸಿದೆ.