ತಿಂಗಳ ಆದಾಯದ ಶೇ.90ರಷ್ಟು ಹಣ ಊರವರ ಬಾಡೂಟಕ್ಕೆ, ಆದರೂ ಪರೋಪಕಾರಿಗೆ ಬಿತ್ತು ಕೋಳ!

ಪ್ರತಿ ತಿಂಗಳು ಅದೆಷ್ಟೇ ಆದಾಯ ಬರಲಿ, ಇದರಲ್ಲಿ ಕೇವಲ 10 ಪರ್ಸೆಂಟ್ ಮಾತ್ರ ತನಗೆ, ಇನ್ನುಳಿದ 90 ಪರ್ಸೆಂಟ್ ಊರವರ ಬಾಡೂಟಕ್ಕೆ ಖರ್ಚು ಮಾಡುತ್ತಿದ್ದ. ಆದರೆ ಈ ಪರೋಪಕಾರಿಯನ್ನು ಹುಡುಕಿ ಬಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
 

First Published Jan 6, 2025, 4:03 PM IST | Last Updated Jan 7, 2025, 4:28 PM IST

ಊರವರಿಗೆ ಬಾಡೂಟ ಹಾಕಿಸುತ್ತಿದ್ದ ಪರೋಪಕಾರಿ ಹೆಸರು ಅಭಿಜಿತ್. ತಿಂಗಳಲ್ಲಿ ಎಷ್ಟೇ ಆದಾಯ ಪಡೆದರೂ ಅದರಲ್ಲಿ 90 ಪರ್ಸೆಂಟ್ ಊರವರಿಗೆ ಖರ್ಚು ಮಾಡುತ್ತಿದ್ದ. ಬಾಡೂಟ ಹಾಕ್ಸಿ ಜಾತ್ರೆ ಮಾಡುತ್ತಿದ್ದ. ಹೀಗಾಗಿ ಈತ ಊರಲ್ಲಿ ಹೀರೋ ಆಗಿದ್ದ. ಸ್ಥಳೀಯ ರಾಜಕಾರಣಿಗಿಂತ ಅಭಿಜಿತ್ ಎಲ್ಲರ ಅಚ್ಚುಮೆಚ್ಚಾಗಿದ್ದ. ಆದರೆ ಈತನ ಬಾಡೂಟದ ಅಸಲಿ ವಿಚಾರ ಬಹಿರಂಗವಾದಾಗ ಇದೀಗ ಊರವರಿಗೆ ತಿಂದ ಬಡೂಟ ವಾಂತಿಯಾಗುವಂತೆ ಆಗುತ್ತಿದೆ. ಇದೀಗ ಪರೋಪಕಾರಿ ಅಭಿಜಿತ್ ಜೈಲು ಸೇರಿದ್ದಾನೆ.