ಸರಿಗಮಪ ಸೀಸನ್-20 ಅಮೋಘ ಪ್ರಾರಂಭ; ಈ ಬಾರಿ ಶೋಗೆ ನಾದಬ್ರಹ್ಮನ ಎಂಟ್ರಿ ಯಾವಾಗ?
ತೀರ್ಪುಗಾರರಾಗಿ ಅರ್ಜುನ್ ಜನ್ಯ, ರಾಜೇಶ್ & VP. ವೀಕ್ಷಕರೇ ಆಯ್ಕೆ ಮಾಡಿದ ಸಿಂಗರ್ಗಳಿಗೆ ಅವಕಾಶ ಹೊಸ ಪ್ರತಿಭೆಗಳನ್ನ ಪರಿಚಯಿಸಲು ಸರಿಗಮಪ ವೇದಿಕೆ ಸಜ್ಜು.
ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಶೋ ಕೂಡ ಒಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಶೋನಿಂದ ಹಲವು ಪ್ರತಿಭಾವಂತ ಗಾಯಕರು ಬೆಳಕಿಗೆ ಬಂದಿದ್ದಾರೆ. ಇದೀಗ ಶೋನ ಹೊಸ ಸೀಸನ್ ಆರಂಭವಾಗುತ್ತಿದೆ. ನಾಳೆಯಿಂದ ಸರಿಗಮಪ ಸೀಸನ್ 20 ಆರಂಭವಾಗ್ತಾ ಇದೆ. ತೀರ್ಪುಗಾರರ ಸ್ಥಾನದಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಇರಲಿದ್ದಾರೆ. ಈ ಸೀಸನ್‌ನಲ್ಲಿ ನಾದಬ್ರಹ್ಮನ ಹಂಸಲೇಖರವರ ಎಂಟ್ರಿ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ಸಣ್ಣ ಪುಟ್ಟ ವಿಡಿಯೋ ಮತ್ತು ರೀಲ್ಸ್‌ಗಳು ಅಪ್ಲೋಡ್ ಆಗಿದೆ. ಆ ಕುರಿತ ಒಂದಿಷ್ಟು ಇನ್ಟ್ರೆಸ್ಟಿಂಗ್ ವಿಷ್ಯಗಳು ಇಲ್ಲಿವೆ ನೋಡಿ.
ಗೀತಕ್ಕನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಈ ಧೈರ್ಯ ಮಾಡ್ತಾ ಇರ್ಲಿಲ್ಲ; ಶಿವಣ್ಣನ ಬಗ್ಗೆ ಅರ್ಜುನ್ ಜನ್ಯ ಭಾವುಕ