ಕರುನಾಡು ಮೆಚ್ಚಿದ ಶಿವ-ಸತಿ ಜೋಡಿ: ಬಿಗ್‌ಬಾಸ್ ಮನೆಯಲ್ಲಿ ಬದ್ಧ ವೈರಿಗಳಾದ ವಿನಯ್-ಸಂಗೀತ
ಈ ವಾರ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಮತ್ತು ಸಂಗೀತ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವನ್ನು ಆಡಿದ್ದಾರೆ.
ಹರ ಹರ ಮಹಾದೇವ ಧಾರಾವಾಹಿಯಲ್ಲಿ ಶಿವ ಮತ್ತು ಸತಿಯಾಗಿದ್ದವರು ಬಿಗ್‌ಬಾಸ್(Bigg Boss) ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ನಟ ವಿನಯ್ (Vinay) ಹಾಗೂ ಸಂಗೀತ ಶೃಂಗೇರಿ (Sangeetha) ಬಿಗ್‌ಬಾಸ್ ಮನೆಯಲ್ಲಿ ಬದ್ಧ ವೈರಿಗಳಾಗಿದ್ದಾರೆ. ಬಿಗ್‌ಬಾಸ್ 10ನೇ ಸೀಸನ್ ಆರಂಭವಾಗಿ ಒಂದು ತಿಂಗಳು ಆಗಿದೆ. ಹರ ಹರ ಮಹದೇವ(Hara Hara Mahadev) ಧಾರಾವಾಹಿಯಲ್ಲಿ ಶಿವನ ಪಾತ್ರ ನಿರ್ವಹಿಸುವ ನಟ ವಿನಯ್ ಬಿಗ್‌ಬಾಸ್ ಪ್ರವೇಶ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಶಿವ-ಸತಿ ಪರಸ್ಪರ ಜಗಳವಾಡಿದ್ದು, ನಾಮಿನೇಷನ್ ಎಪಿಸೋಡ್ನ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಮೊದಲ ವಾರವೇ ಸಂಗೀತ ವಿನಯ್‌ಗೆ ನಾಲಾಯಕ್ ಬೋರ್ಡ್ ಕೊರಳಿಗೆ ಹಾಕಿ, ಸೂಕ್ತ ಕಾರಣವನ್ನು ಕೊಟ್ಟಿದ್ದರು. ಸಂಗೀತಾ ಅವರಿಗೆ ಮೊದಲ ದಿನ ಕಡಿಮೆ ಜನ ಮತ ಬಂದ ಕಾರಣ ಅವರನ್ನು ಅಸಮರ್ಥ ಎಂದು ಪರಿಗಣಿಸಿ ಅವರಿಗೆ ಪ್ರತ್ಯೇಕ ಬಟ್ಟೆಗಳನ್ನು ನೀಡಿ ಇತರೆ ಸದಸ್ಯರಿಂದ ಭಿನ್ನವಾಗಿ ಪರಿಗಣಿಸಲಾಗಿದೆ.
ಇದನ್ನೂ ವೀಕ್ಷಿಸಿ: Today Horoscope: ದೀಪಾವಳಿ ಹಬ್ಬವನ್ನು ಯಾವ ರೀತಿ ಆಚರಿಸಬೇಕು ? ಬಲಿ ಪಾಡ್ಯಮಿಯ ಮಹತ್ವವೇನು ?