ಬರೀ ಸಿಂಪತಿ ಕಾರ್ಡ್ ಪ್ಲೇ ಮಾಡಿ ಗೆದ್ದನೆಂಬ ಆರೋಪ, ಹನುಮಂತ ಟ್ರೋಫಿಗೆ ಅರ್ಹನೆನ್ನಲು ಈ 5 ಕಾರಣಗಳೇ ಸಾಕು!
ಬಿಗ್ ಬಾಸ್ ಸೀಸನ್ 10 ರ ವಿಜೇತ ಹನುಮಂತ. ಸಿಂಪತಿಯಿಂದಲ್ಲ ಗೆದ್ದಿದ್ದಲ್ಲ. ಹನುಮಂತನ ಗೆಲುವಿಗೆ ಕಾರಣವಾದ 5 ಅಂಶಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಹನುಮಂತ ಬರೀ ಸಿಂಪತಿ ಕಾರ್ಡ್ ಪ್ಲೇ ಮಾಡಿ ಟ್ರೋಫಿ ಗೆದ್ದಿದ್ದಾನೆ ಅನ್ನೋದು ದೊಡ್ಮನೆ ಇತರ ಸದಸ್ಯರ ಆರೋಪ. ಆದ್ರೆ ಅದು ನಿಜ ಅಲ್ಲ. ಹನುಮಂತ ಗೆದ್ದಿದ್ದು ಸಹಜವಾಗೇ ಇತರ ಸ್ಪರ್ಧಿಗಳ ಅಭಿಮಾನಿಗಳನ್ನ ಕೆರಳಿ ಕೆಂಡವಾಗಿಸಿದೆ. ತ್ರಿವಿಕ್ರಮ್ ಗೆಲ್ಲಬೇಕು ಅಂತ ಬಯಸಿದ್ದ ಅಭಿಮಾನಿಗಳು, ನಿಜವಾದ ವಿನ್ನಿಂಗ್ ಕ್ಯಾಂಡಿಡೇಟ್ ತ್ರಿವಿಕ್ರಮ್, ಆದ್ರೆ ಹನುಮಂತ ಸಿಂಪತಿ ಕಾರ್ಡ್ ಪ್ಲೇ ಮಾಡಿ ಗೆದ್ದ ಅಂತ ಆರೋಪ ಮಾಡ್ತಾ ಇದ್ದಾರೆ. ಇನ್ನೂ ಕೆಲವು ಸ್ಪರ್ಧಿಗಳು ಇವನು ರಿಸರ್ವೇಷ್ ಕ್ಯಾಂಡಿಡೇಟ್ ಅಂತ ಟೀಕೆ ಮಾಡ್ತಾ ಇದ್ದಾರೆ. ಆದ್ರೆ ನಿಜಕ್ಕೂ ಹನುಮಂತ ಗೆದ್ದಿದ್ದು ಸಿಂಪತಿಯಿಂದಲೇ ಅಂದ್ರೆ ತಪ್ಪಾಗುತ್ತೆ.ಬರೀ ಸಿಂಪತಿ ಗಿಟ್ಟಿಸಿಕೊಂಡು ಪ್ರಶಸ್ತಿ ಅಂತಿಮ ರೇಸ್ ಗೆಲ್ಲೋದು ಸುಲಭ ಅಲ್ಲ. ಅಷ್ಟಕ್ಕೂ ಹನುಮಂತ ಈ ಪ್ರಶಸ್ತಿ ಅರ್ಹ ಅನ್ನೋದಕ್ಕೆ ಈ 5 ಕಾರಣಗಳೇ ಸಾಕು.
ಹನುಮಂತ ಬರೋದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಎಂಟರ್ಟೈನ್ಮೆಂಟ್ ಅನ್ನೋದೇ ಇರಲಿಲ್ಲ. ಬರೀ ಕಿತ್ತಾಡೋದನ್ನೇ ಆಟ ಅಂದುಕೊಂಡುಬಿಟ್ಟಿದ್ರು ಸ್ಪರ್ಧಿಗಳು. ಆರಂಭದಲ್ಲಿ ಜಗದೀಶ್ - ರಂಜಿತ್ ಹೀಗೆ ಕಿತ್ತಾಡಿಕೊಂಡೇ ಎವಿಕ್ಟ್ ಅದ್ರು. ರಜತ್- ಚೈತ್ರಾ ಕೂಡ ಕೊನೆತನಕ ಕಿತ್ತಾಟದಲ್ಲೇ ಕಾಲ ಕಳೆದರು. ಆದ್ರೆ ಬಿಗ್ ಬಾಸ್ ಮನೆಯಲ್ಲಿ ತನ್ನ, ಮುಗ್ದತೆ, ಒಂಚೂರು ತರ್ಲೆಗಳಿಂದ ನಗುವಿನ ಅಲೆ ಮೂಡುವಂತೆ ಮಾಡಿದ್ದೇ ಹನುಮಂತ.
ಹನುಮಂತ ಈ ಸೀಸನ್ನುದ್ದಕ್ಕೂ ಹಾಡಿದ ಹಾಡುಗಳು ಜನರನ್ನ ರಂಜಿಸಿದ್ದು ಸುಳ್ಳಲ್ಲ. ಹನುಮಂತ ಹಾಡಿದ ಜವಾರಿ ಹಾಡುಗಳಲ್ಲಿ ತರ್ಲೆ, ತಮಾಷೆ ಜೊತೆಗೆ ಜೀವನ ತತ್ವಗಳು ಕೂಡ ಇರ್ತಾ ಇದ್ವು. ಅಂತೆಯೇ ಈ ಹಾಡು ಬಿಗ್ ಬಾಸ್ ವೀಕ್ಷಕರ ಮೂಡ್ನ ರಿಫ್ರೆಶ್ ಮಾಡಿದ್ವು. ಇನ್ನೂ ಥಟ್ ಅಂತ ಹಾಡು ಕಟ್ಟಿ, ಸನ್ನಿವೇಶಕ್ಕೆ ತಕ್ಕಂತೆ ಹಾಡೋದ್ರಲ್ಲೂ ಹನುಮಂತ ಪಂಟರ್. ಎಷ್ಟೊ ಸಾರಿ ತನ್ನ ಹಾಡಿನ ಮೂಲಕವೇ ಮನೆಮಂದಿಗೆ ಟಾಂಗ್ ಕೊಟ್ಟು ಹಿಟ್ ಆದವನು ಈ ಹನುಮಂತ.
ಯೆಸ್ ಹನುಮಂತ ನೋಡೋದಕ್ಕೆ ವಾಮನ ಮೂರ್ತಿಯಂತೆ ಕಂಡ್ರೂ ಟಾಸ್ಕ್ ವಿಚಾರಕ್ಕೆ ಬಂದ್ರೆ ಮಹಾ ಬಲವಂತ. ಅನೇಕ ಟಾಸ್ಕ್ಗಳನ್ನ ಹನುಮಂತ ಯಶಸ್ವಿಯಾಗಿ ಗೆದ್ದಿದ್ದಾನೆ. ಘಟಾನು ಘಟಿಗಳನ್ನ ಸೋಲಿಸಿದ್ದಾನೆ. ಫಿನಾಲೆ ಟಿಕೆಟ್ ಸಂದರ್ಭದಲ್ಲಿ ತ್ರಿವಿಕ್ರಂನ ಸೋಲಿಸಿದ್ದು ಇಡೀ ಸೀಸನ್ಗೆ ಟರ್ನಿಂಗ್ ಪಾಯಿಂಟ್ ಅಂದ್ರೆ ತಪ್ಪಾಗಲ್ಲ.. ರಜತ್ ಹಾಗೂ ಭವ್ಯಾ ಅವರಿಗೂ ಹನುಮಂತ ಸೋಲಿನ ರುಚಿ ತೋರಿಸಿದ್ದ. ಹನುಮಂತ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಆದಾಗೆಲ್ಲ ಅವರ ತಂಡಕ್ಕೆ ಜಯ ಸಿಕ್ಕಿದೆ. ಕೆಲವು ಕಡೆಗಳಲ್ಲಿ ಕ್ಲೀನ್ ಸ್ವೀಪ್ ಕೂಡ ಆಗಿದೆ.
ಉಳಿದೆಲ್ಲಾ ಸ್ಪರ್ಧಿಗಳು ಮನೆಯಲ್ಲಿ ಹೇಗಿರಬೇಕು. ಹೇಗೆ ಆಡ ಬೇಕು. ಹೇಗೆ ಸ್ಕ್ರೀನ್ ಸ್ಪೇಸ್ ತಗೋಬೇಕು ಅಂತ ತಲೆ ಕೆಡಿಸಿಕೊಂಡು ಲೆಕ್ಕಾಚಾರ ಹಾಕ್ತಾ ಇದ್ರೆ ಹನುಮಂತ ಇಂಥಾ ಯೋಚನೇನೇ ಮಾಡ್ಲಿಲ್ಲ. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನಿದ್ದ. ನಾಮಿನೇಟ್ ಮಾಡಿ ಎಲ್ಲರೂ ಕೂಗಾಡಿದರೆ ಹನುಮಂತ ಮಾತ್ರ ತಲೆ ಕೆಡಿಸಿಕೊಳ್ಳದೆ, ಟೆನ್ಷನ್ ಮಾಡಿಕೊಳ್ಳದೆ ಆಡಿದ್ದ. ತಲೆಕೆಡಿಸಿಕೊಂಡವರು ಔಟ್ ಆದರೆ, ಸಿಂಪಲ್ ಆಗಿದ್ದವರು ಗೆದ್ದಿದ್ದಾರೆ.
ಒಟ್ಟಾರೆ ಹನುಮಂತ ಬರೀ ಸಿಂಪತಿಯಿಂದ ಗೆದ್ದ ಅಂದ್ರೆ ತಪ್ಪಾಗುತ್ತೆ. ಹೆಚ್ಚು ಯೋಚಿಸಿದೇ.ಇದ್ದಿದ್ದು ಇದ್ದ ಹಾಗೆ ಆಡಿದ ಹನುಮಂತ ಗೆದ್ದು ಬೀಗೀದ್ದಾನೆ. ಎಲ್ಲರಿಗೂ ಹೊಸ ಪಾಠವೊಂದನ್ನ ಕಲಿಸಿದ್ದಾನೆ.