ಮಿ.ಪರ್ಫೆಕ್ಟ್ ದಾಂಪತ್ಯದ ಬಗ್ಗೆ ಸಲ್ಲು ಲೇವಡಿ! ಆಮೀರ್‌ಗೆ ಅವಮಾನ ಮಾಡಿದ್ರಾ ಸಲ್ಮಾನ್?

ಬಾಲಿವುಡ್ ನಟ ಸಲ್ಮಾನ್ ಖಾನ್, ಆಮೀರ್ ಖಾನ್ ಅವರ ದಾಂಪತ್ಯದ ಬಗ್ಗೆ ತಮಾಷೆ ಮಾಡಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ ಸಲ್ಮಾನ್, ಆಮೀರ್ ಅವರ ಎರಡು ಮದುವೆಗಳು ಮುರಿದು ಬಿದ್ದಿರುವ ಬಗ್ಗೆ ಕಾಲೆಳೆದಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಅದೆಷ್ಟು ಬಿಂದಾಸ್ ಆಗಿ ಮಾತನಾಡ್ತಾರೆ ಅನ್ನೋದು ಗೊತ್ತೇ ಇದೆ. ಸಲ್ಮಾನ್ ಯಾರನ್ನ ಬೇಕಾದ್ರೂ ಲೇವಡಿ ಮಾಡ್ತಾರೆ, ಯಾವ ವಿಷ್ಯದ ಬಗ್ಗೆ ಬೇಕಾದ್ರೂ ತಮಾಷೆ ಮಾಡಿಬಿಡ್ತಾರೆ. ಅಂತೆಯೇ ಸದ್ಯ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಕಾಲೆಳೆದಿದ್ದಾರೆ ಸಲ್ಲುಮಿಯಾ. ಕಪಿಲ್ ಶರ್ಮಾ ನಡೆಸಿಕೊಡುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದು , ಸದ್ಯ ಪ್ರೋಮೋ ರಿಲೀಸ್ ಆಗಿದೆ., ಪ್ರೋಮೋದಲ್ಲಿ ಸಲ್ಲು ತಮಾಷೆ ಮಾಡ್ತಾ ಮನಸಾರೆ ನಕ್ಕಿದ್ದಾರೆ. ಅದ್ರಲ್ಲೂ ಆಮೀರ್ ದಾಂಪತ್ಯದ ಬಗ್ಗೆ ತಮಾಷೆ ಮಾಡಿರೋದು ಪ್ರೋಮೋದಲ್ಲಿದೆ.

ಆಮೀರ್ ಖಾನ್​ನ ಮಿಸ್ಟರ್ ಪರ್ಫೆಕ್ಟ್ ಅಂತ ಎಲ್ಲರೂ ಕರೆಯೋ ವಿಷ್ಯ ಗೊತ್ತೇ ಇದೆ. ಬೇರೆ ಎಲ್ಲದರಲ್ಲೂ ಅವರು ಪರ್ಫೆಕ್ಟ್. ಆದ್ರೆ ಮದುವೆ ವಿಷ್ಯಕ್ಕೆ ಬಂದ್ರೆ ಫುಲ್ ಎಡವಟ್. ಯಾಕಂದ್ರೆ ಆಮೀರ್ ಖಾನ್​ರ ಎರಡು ಮದುವೆಗಳು ಮುರಿದು ಬಿದ್ದಿವೆ. ಎರಡನೇ ಪತ್ನಿ ಕಿರಣ್ ರಾವ್ ಜೊತೆ ಡಿವೋರ್ಸ್ ಆದ ಮೇಲೆ ಕೆಲ ಕಾಲ ಒಬ್ಬಂಟಿಯಾಗಿದ್ದ ಆಮೀರ್ ಸದ್ಯ ಬೆಂಗಳೂರು ಮೂಲದ ಗೌರಿ ಅನ್ನೋರ ಜೊತೆಗೆ ಡೇಟಿಂಗ್ ಮಾಡ್ತಾ ಇದ್ದಾರೆ. ಇತ್ಥಿಚಿಗೆ ಗೌರಿಯನ್ನ ತಮ್ಮ ಮಾಜಿ ಪತ್ನಿ ಮತ್ತು ಮಕ್ಕಳಿಗೂ ಪರಿಚಯ ಮಾಡಿಸಿದ್ರು. ಇದೇ ವಿಷ್ಯ ಇಟ್ಟುಕೊಂಡು ಸಲ್ಮಾನ್ ಗೇಲಿ ಮಾಡಿದ್ದಾರೆ. ಸಲ್ಲುಮಿಯಾ ಮತ್ತು ಆಮೀರ್ ಸಮಕಾಲೀನರು. ಸಲ್ಮಾನ್ ಇವತ್ತಿಗೂ ಮದುವೆಯೇ ಆಗದೇ ಏಕಾಂಗಿ ಜೀವನ ಮಾಡ್ತಾ ಇದ್ದಾರೆ. ಇತ್ತ ಆಮೀರ್ ಮೂರನೇ ಸಂಬಂಧ ಶುರುಮಾಡಿದ್ದಾರೆ. ಸೋ ಆಮೀರ್ ಬಗ್ಗೆ ಸಲ್ಲು ಹೇಳಿರೋ ಈ ಮಾತು ಸಖತ್ ಸದ್ದು ಮಾಡ್ತಾ ಇದೆ.

Related Video