ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್ ಗೌಡ, ರಜತ್‌ಗೆ ಎಷ್ಟು ವರ್ಷ ಶಿಕ್ಷೆ ಆಗಬಹುದು?
ಮಚ್ಚು ಹಿಡಿದು ಹುಚ್ಚು ಹುಚ್ಚಾಗಿ ರೀಲ್ಸ್ ದಾಸನ ಶಿಷ್ಯರು ತಮ್ಮ ಗುರು ಇದ್ದ ಪರಪ್ಪನ ಅಗ್ರಹಾರದ ದರ್ಶನ ಮಾಡಿದ್ದಾರೆ. ಇದೊಂದು ಸಣ್ಣ ಕೇಸು ಬೇಲ್ ಸಿಗುತ್ತೆ ಹೊರಬಂದು ಮತ್ತೆ ದಳತ್ತು ತೋರಿಸಬಹುದು ಅಂದುಕೊಂಡ ರಜತ್ & ವಿನಯ್ಗೆ ಕೋರ್ಟ್ ಶಾಕ್ ಕೊಟ್ಟಿದೆ.
ಮಚ್ಚು ಹಿಡಿದು ಹುಚ್ಚು ಹುಚ್ಚಾಗಿ ರೀಲ್ಸ್ ಮಾಡಿದ್ದ ವಿನಯ್ ಗೌಡ, ರಜತ್ ಕಿಶನ್ ಅವರು ದರ್ಶನ್ ಇದ್ದ ಪರಪ್ಪನ ಅಗ್ರಹಾರ ತಲುಪಿದ್ದಾರೆ. ರೀಲ್ಸ್ನಲ್ಲಿ ಮಚ್ಚು ಝಳಪಿಸಿದ್ದ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ಹಾಕಿರೋ ಪೊಲೀಸರು , ಬೇರೆ ಮಚ್ಚು ತಂದುಕೊಟ್ಟು ಸಾಕ್ಷನಾಶ ಮಾಡ್ಲಿಕ್ಕೆ ಮುಂದಾಗಿದ್ದಕ್ಕೆ ಮತ್ತೊಂದು ಕೇಸ್ ಜಡಿದು ಜೈಲಿಗೆ ಅಟ್ಟಲಾಗಿದೆ. ಮಂಗಳವಾರ ರಾತ್ರಿ ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದ ವಿನಯ್ ಗೌಡ ಌಂಡ್ ರಜತ್ ಇವತ್ತು ಬೇಲ್ ಸಿಕ್ಕುತ್ತೆ ಅನ್ನೋ ಆಸೆಯಲ್ಲಿದ್ರು. ಆದ್ರೆ ಕೋರ್ಟ್ ಇವರನ್ನ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ನೀಡಿದೆ. ಹೌದು, ಸೋಷಿಯಲ್ ಮಿಡಿಯಾದಲ್ಲಿ ಮಾರಕಾಸ್ತ್ರಗಳನ್ನ ಪ್ರದರ್ಶನ ಮಾಡೋದು ಗಂಭೀರ ಅಪರಾಧ. ಇದಕ್ಕೆ ಮೂರದಿಂದ 3 ರಿಂದ 7 ವರ್ಷ ಶಿಕ್ಷೆ ಕೊಡಬಹುದು. ಸೋ ಇವರನ್ನ ಮತ್ತಷ್ಟು ವಿಚಾರಣೆ ಮಾಡೋದಕ್ಕೆ ಪೊಲೀಸ್ ವಶಕ್ಕೆ ನೀಡಬೇಕು ಪ್ರಾಸಿಕ್ಯೂಷನ್ ವಾದಮಂಡನೆ ಮಾಡಿದೆ .