ವಿದೇಶದಲ್ಲಿ ಜಾಲಿ ಮೂಡ್​​ನಲ್ಲಿ ನಿವೇದಿತಾ ಗೌಡ ಪಾರ್ಟಿ, ಯಾರದು ಜೊತೆಗಿರುವಾತ?

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ವಿದೇಶದಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡುತ್ತಿದ್ದಾರೆ. ದಿನನಿತ್ಯ ಡೇರಿಂಗ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿರುವ ನಿವೇದಿತಾ, ಒಬ್ಬ ನಿಗೂಢ ವ್ಯಕ್ತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

First Published Jan 8, 2025, 4:44 PM IST | Last Updated Jan 8, 2025, 4:44 PM IST

ಚಂದನ್ ಶೆಟ್ಟಿ ಜೊತೆಗೆ ಡಿವೋರ್ಸ್ ಪಡೆದ ಮೇಲೆ ನಿವೇದಿತಾ ಗೌಡ ಫುಲ್ ಫ್ರೀ ಬರ್ಡ್ ಆಗಿ ಬಿಟ್ಟಿದ್ದಾಳೆ. ನ್ಯೂ ಇಯರ್​ಗೆ ವಿದೇಶದಲ್ಲಿ ಪಾರ್ಟಿ ಮಾಡಿರೋ ನಿವಿ ದಿನಕ್ಕೊಂದು ಧಮಾಕೇದಾರ್ ವಿಡಿಯೋನ ಅಪ್​ಲೋಡ್ ಮಾಡ್ತಾ ಇದ್ದಾಳೆ.  ಒಂದಿನ ಮೈಮೇಲೆ ಓತಿಕ್ಯಾತ ಬಿಟ್ಕೊಂಡ್ರೆ ಮತ್ತೊಂದಿನ ಬೆಂಕಿ ಜೊತೆ ಸರಸ ಆಡ್ತಿದ್ದಾಳೆ ಬೊಂಬೆ. ಆದ್ರೆ ಇದೆಲ್ಲಾ ಸರಿ..ನಿವಿ ಜೊತೆಗಿರೋ ಹುಡ್ಗ ಯಾರು ಅನ್ನೋದು ಜನ ಕೇಳ್ತಾ ಇರೋ ಪ್ರಶ್ನೆ.

ಡಿವೋರ್ಸ್ ಆದ ಮೇಲೆ ಕೆಲವರು ‘ಮದುವೆ ಮುರಿದು ಬಿದ್ದೋಯ್ತಲ್ಲಪ್ಪಾ... ಮುಂದೇನ್ ಗತಿ’ ಅಂತ ನೋವು, ನಿರಾಸೆಯಲ್ಲಿ ಮುಳುಗ್ತಾರೆ. ಆದ್ರೆ ಇನ್ನು ಕೆಲವರು ‘ಅಬ್ಬಾ ಸ್ವಾತಂತ್ರ ಸಿಕ್ತಲ್ಲಪ್ಪಾ’ ಅಂತ ಫುಲ್ ಫ್ರೀ ಬರ್ಡ್ ತರಹಾ ಹಾರಾಡ್ತಾ ಪಾರ್ಟಿ ಮಾಡ್ತಾರೆ. ನಮ್ಮ ನಿವೇದಿತಾ ಗೌಡ ಅಲಿಯಾಸ್ ನಿವಿ ಇದ್ರಲ್ಲಿ ಎರಡನೇ ಕೆಟಗರಿಗೆ ಸೇರ್ತಾಳೆ. ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಸಿಕ್ಕಿದ್ದೇ ಸಿಕ್ಕಿದ್ದು ನಿವಿ ಪಂಜರದಿಂದ ಹೊರಬಂದ ಹಕ್ಕಿಯಂತೆ ಸ್ವಚ್ಚಂದವಾಗಿ ಹಾರಾಡ್ತಾ ಇದ್ದಾಳೆ.ಎಲ್ಲರೂ ವರ್ಷಾಂತ್ಯದಲ್ಲಿ ಪಾರ್ಟಿ ಮಾಡಿದ್ರೆ ನಿವೇದಿತಾ ಡಿಸೆಂಬರ್ ಆರಂಭದಿಂದಲೇ ಪಾರ್ಟಿ ಮಾಡ್ತಾ ಇದ್ದಾಳೆ. ನ್ಯೂಯಾರ್ಕ್​ನಲ್ಲಿ ಸ್ನೇಹಿತರ ಜೊತೆ ತಿರುಗಾಡ್ತಾ ಪಬ್ಬು, ಕ್ಲಬ್ಬು , ಬೀಚು ಅಂತ ಸುತ್ತತಾ ಇರೋ ಈ ಚೆಲುವೆ ದಿನಕ್ಕೊಂದು ವಿಡಿಯೋನ ಅಪ್​ಲೋಡ್ ಮಾಡ್ತಾ , ಸೋಷಿಯ

ಲ್ ಮಿಡಿಯಾದಲ್ಲಿ ಕಿಚ್ಚು ಹಚ್ತಾ ಇದ್ದಾಳೆ.

ಮೊನ್ನೆಯಷ್ಟೇ ಮೈಮೇಲೆ ಓತಿಕ್ಯಾತ ಬಿಟ್ಕೊಂಡು ಎಲ್ಲರ ಮೈಮನ ಜುಂ ಅನ್ನಿಸಿದ್ದ ನಿವಿ,. ಈಗ ಬೆಂಕಿ ಜೊತೆ ಸರಸ ಆಡೋ ಮತ್ತೊಂದು ಮತ್ತೊಂದು ವಿಡಿಯೋ ಅಪ್​ಲೋಡ್ ಮಾಡಿದ್ದಾಳೆ. ಇದನ್ನ ನೋಡಿದ ಪಡ್ಡೆ ಹೈಕಳು ಜೋಪಾನ ಕಣಮ್ಮಿ, ನಿನ್ನ ಸಿಲ್ಕಿನಂಥಾ ಮೈಗೆ ಕಿಡಿ ತಾಕಿದ್ರೆ ಏನ್ ಗತಿ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.

ಇನ್ನೂ ನಿವೇದಿತಾಳ ಈ ವಿಡಿಯೋಸ್​ನಲ್ಲಿ ಒಬ್ಬ ಕಟ್ಟುಮಸ್ತಾದ ಹೈದ ಬೇರೆ ಆವಾಗಾವಾಗ ಕಾಣಿಸಿಕೊಳ್ತಾ ಇದ್ದಾನೆ. ಇವನ ಬಗ್ಗೆ ನಮ್ಮ ಹುಡುಗ್ರು ಬೇಜಾನ್ ತಲೆ ಕೆಡಿಸಿಕೊಳ್ತಾ ಇದ್ದಾರೆ. ಚಂದನನ ಗೊಂಬೆನಾ ಅದ್ಯಾರೋ ಪರದೇಸಿ ಹೈದ ಬುಟ್ಟಿಗೆ ಹಾಕ್ಕೊಂಡ್ ಬಿಟ್ನಾ ಅಂತ ನಮ್ಮ ಬೆಂಗ್ಳೂರ್ ಬಾಯ್ಸ್ ಕಂಗಾಲಾಗಿದ್ದಾರೆ.

ನಿವೇದಿತಾಳ ರೀಲ್ಸ್​, ಫೋಟೋಸ್​​ಗೆ ತಹರೇವಾರಿ ಕಾಮೆಂಟ್ಸ್ ಬರ್ತಾ ಇವೆ. ಕೆಲವರು ನಿವೇದಿತಾನ ಆಡಿಕೊಂಡ್ರೆ ಮತ್ತೆ ಕೆಲವರು ಜೋಪಾನ ಅಂತ ಎಚ್ಚರಿಸ್ತಾ ಇದ್ದಾರೆ. ಅದ್ರಲ್ಲೂ ಬೆಂಕಿ ಜೊತೆ ಸರಸ ಅಡೋ ಈ ರೀಲ್​ಗಂತೂ ಭಯಕಂರ ಕಾಮೆಂಟ್ಸ್ ಬಂದಿವೆ. ಅನೇಕರು ಮಾರ್ಮಿಕವಾಗಿ ‘ನಿಲ್ಲು ನಿಲ್ಲೇ ಪತಂಗ. ಬೇಡ ಬೇಡ ಬೆಂಕಿಯ ಸಂಗ’ ಅಂತ ನಿವಿಗೆ ಪಾಠ ಹೇಳಿದ್ದಾರೆ.