ಈ ವೀಕೆಂಡ್​ಗೆ ಸರಿಗಮಪ ವೇದಿಕೆಯಲ್ಲಿ ಕಿಚ್ಚೋತ್ಸವ: ಅಮ್ಮನನ್ನ ನೆನೆದು ಕಣ್ಣೀರು ಹಾಕಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಗೆಲುವಿನ ಸಂಭ್ರಮದಲ್ಲಿದ್ದಾರೆ. ಮೊದಲ ವಾರ ಭರ್ಜರಿ ಕಮಾಯಿ ಮಾಡಿರೋ ಮ್ಯಾಕ್ಸ್ ಈಗಲೂ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಸಿನಿಮಾಗೆ ರಿಪೀಟ್ ಆಡಿಯನ್ಸ್ ಬರ್ತಾ ಇದ್ದು, ಕಿಚ್ಚ ಫುಲ್ ಖುಷ್ ಆಗಿದ್ದಾರೆ. ಇನ್ನೂ ಈ ವಾರದ ಸರಿಗಮಪ ಶೋನಲ್ಲಿ ಸುದೀಪ್ ಭಾಗಿಯಾಗಿದ್ದಾರೆ. 
 

First Published Jan 2, 2025, 11:48 AM IST | Last Updated Jan 2, 2025, 11:48 AM IST

ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಗೆಲುವಿನ ಖುಷಿಯಲ್ಲಿದ್ದಾರೆ. ಈ ನಡುವೆ ಸರಿಗಮಪ ಶೋನಲ್ಲಿ ಭಾಗಿಯಾಗಿರೋ ಕಿಚ್ಚನಿಗೆ ಸರ್​ಪ್ರೈಸ್ ಗಿಫ್ಟ್ ಕೊಡಲಾಗಿದೆ. ಸರಿಗಮಪ ಟೀಂ ಕಿಚ್ಚನಿಗೆ ತಾಯಿಯ ಮೂರ್ತಿಯನ್ನ ಗಿಫ್ಟ್ ಕೊಟ್ರೆ, ಸುದೀಪ್ ಪುತ್ರಿ ಸಾನ್ವಿ ಹಾಡು ಹಾಡಿ ಅಪ್ಪನಿಗೆ ಸರ್​ಪ್ರೈಸ್ ಕೊಟ್ಟಿದ್ದಾಳೆ. ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಗೆಲುವಿನ ಸಂಭ್ರಮದಲ್ಲಿದ್ದಾರೆ. ಮೊದಲ ವಾರ ಭರ್ಜರಿ ಕಮಾಯಿ ಮಾಡಿರೋ ಮ್ಯಾಕ್ಸ್ ಈಗಲೂ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಸಿನಿಮಾಗೆ ರಿಪೀಟ್ ಆಡಿಯನ್ಸ್ ಬರ್ತಾ ಇದ್ದು, ಕಿಚ್ಚ ಫುಲ್ ಖುಷ್ ಆಗಿದ್ದಾರೆ. ಇನ್ನೂ ಈ ವಾರದ ಸರಿಗಮಪ ಶೋನಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ಈಗಾಗ್ಲೇ ಅದರ ಚಿತ್ರೀಕರಣ ಮುಗಿಸಿದ್ದು, ಎಪಿಸೋಡ್​ನಲ್ಲಿ ಸ್ಪರ್ಧಿಗಳು ಸುದೀಪ್ ಹಾಡುಗಳನ್ನ ಹಾಡಿ ರಂಜಿಸಿದ್ದಾರೆ. ಇನ್ನೂ ಸರಿಗಮಪ ಟೀಂ ಸುದೀಪ್​ಗೆ ಅಮ್ಮನ ಮೂರ್ತಿಯನ್ನ ಗಿಫ್ಟ್ ಕೊಟ್ಟಿದ್ದು, ಅದನ್ನ ಕಂಡು ಸುದೀಪ್ ಭಾವುಕರಾಗಿದ್ದಾರೆ. ಜೊತೆಗೆ ಸುದೀಪ್ ಪುತ್ರಿ ವೇದಿಕೆಯಲ್ಲಿ ಹಾಡನ್ನ ಹಾಡಿ ಅಪ್ಪನಿಗೆ ಸರ್​ಪ್ರೈಸ್ ಗಿಫ್ಟ್ ಕೊಟ್ಟಿದ್ದಾಳೆ. ಒಟ್ಟಾರೆ ಈ ವಾರ ಸರಿಗಮಪ ಶೋನಲ್ಲಿ ಕಿಚ್ಚೋತ್ಸವ ನಡೆಯಲಿದೆ.