Asianet Suvarna News Asianet Suvarna News

ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ಸುದೀಪ್ ಪಡೆದ ಸಂಭಾವನೆ ಎಷ್ಟು?

ಬಿಗ್ ಬಾಸ್ ಒಟಿಟಿ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ಅವರಿಗೆ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅಂದಹಾಗೆ ಕಿಚ್ಚ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಮೂಲಗಳ ಪ್ರಕಾರ ಸುದೀಪ್ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. 

Aug 15, 2022, 12:21 PM IST

ಬಿಗ್ ಬಾಸ್ ಒಟಿಟಿ ಶೋ ಆರಂಭವಾಗಿ ಒಂದು ವಾರ ಕಳೆದಿದೆ. ಕಿಚ್ಚ ಸುದೀಪ್ ಗ್ರ್ಯಾಂಡ್ ಒಪನಿಂಗ್ ಮಾಡಿ ಸ್ಪರ್ಧಿಗಳನ್ನು ಸ್ವಾಗತಿಸಿದ್ದಾರೆ. 16 ಸ್ಪರ್ಧಿಗಳು ಬಿಗ್ ಬಾಸ್ ಒಟಿಟಿ ಮನೆ ಸೇರಿಸಿದ್ದರು. ಈಗಾಗಲೇ ಮನೆಯಿಂದ ಮೊಗದಲ ಸ್ಪರ್ಧಿ ಔಟ್ ಆಗಿದ್ದಾರೆ. ಕಿರಣ್ ಯೋಗೇಶ್ವರ್ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ಅವರಿಗೆ ಸಂಭಾವನೆ ಎಷ್ಟು ಎನ್ನುವ ಚರ್ಚೆ ಪ್ರಾರಂಭವಾಗಿದೆ. ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಮೂಲಗಳ ಪ್ರಕಾರ ಸುದೀಪ್ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಬ್ರಾಂಡ್ ಆಗಿರುವ ಸುದೀಪ್ ಅದ್ಭುತವಾಗಿ ಶೋ ಹೋಸ್ಟ್ ಮಾಡುತ್ತಾರೆ. ಕಿಚ್ಚನ ಶೈಲಿ ಎಲ್ಲರಿಗೂ ತುಂಬಾ ಇಷ್ಟವಾಗಿದೆ. ಹಾಗಾಗಿ ಕಿಚ್ಚ ಬಿಗ್ ಬಾಸ್ ಕನ್ನಡ ಶೋನ ಬ್ರಾಂಡ್ ಆಗಿದ್ದಾರೆ ಎಂದರೆ ತಪ್ಪಾಗಲ್ಲ.