Asianet Suvarna News Asianet Suvarna News

ನಶೆಯಲ್ಲಿದ್ದ ಯುವಕ ಕೆಟ್ಟದಾಗಿ ವರ್ತಿಸಿದ: ಸಾನ್ಯಾ ಅಯ್ಯರ್

ಮಂಗಳೂರಿನ ಪುತ್ತೂರು ಕಂಬಳದಲ್ಲಿ ನಡೆದ ಗಲಾಟೆಯ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಸಾನ್ಯಾ ಅಯ್ಯರ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.
 

ಪುತ್ತೂರು ಕಂಬಳ ಗಲಾಟೆ ಕುರಿತು ಸಾನ್ಯಾ ಅಯ್ಯರ್ ಮಾತನಾಡಿದ್ದಾರೆ. ಕಂಬಳಕ್ಕೆ ನನ್ನನ್ನು ಅತಿಥಿಯಾಗಿ ಕರೆದಿದ್ದರು. ಕಂಬಳ ತುಂಬಾ ಚೆನ್ನಾಗಿ ನಡೆದುಕೊಂಡು ಹೋಯ್ತು ಎಂದು ಸಾನಿಯಾ ಅಯ್ಯರ್ ಹೇಳಿದರು. ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಆಯ್ತು, ಕಂಬಳ ನೋಡಿ ವಾಪಸ್ಸು ಹೋಗುವಾಗ ನಶೆಯಲ್ಲಿದ್ದ ಯುವಕ ನನ್ನ ಸ್ನೇಹಿತರ ಮೈ ಮೇಲೆ ಬಿದ್ದು ಕೆಟ್ಟದಾಗಿ ವರ್ತಿಸಿದ. ನಾವು ಕಿರುಚಿಕೊಂಡ್ವಿ. ಜನರೆಲ್ಲಾ ಸೇರಿದ್ರು. ಜನ ಸೇರಿದ ತಕ್ಷಣ ಅವನು ಅಲ್ಲಿಂದ ಹೋದ, ನಮ್ಮ ಕೈಗೂ ಸಿಗಲಿಲ್ಲ ಎಂದು ಸಾನಿಯಾ ಅಯ್ಯರ್ ಹೇಳಿದ್ರು.

Video Top Stories