ಮೋಕ್ಷಿತಾಗೆ ಬಿಗ್ ಬಾಸ್ ಅರ್ಥನೇ ಆಗಿಲ್ವಾ? ಕಿಚ್ಚನ ಪಂಚಾಯತಿಯಲ್ಲಿ ಕೆಲವರಿಗೆ ಕಿವಿಮಾತು, ಕೆಲವರಿಗೆ ಮಾತಿನ ಏಟು!

ಗಾಸಿಪ್ ಮಾಡಿದ ತ್ರಿವಿಕ್ರಮ್ & ಗೌತಮಿಗೆ ಕಿಚ್ಚನ ಕ್ಲಾಸ್.ಈ ವಾರ ಸೇಫ್ ಆದ ಮೊದಲ ಕಂಟೆಸ್ಟೆಂಟ್ ರಜತ್.ಮೊಕ್ಷಿತಾ ಮಂಜಣ್ಣ ಗೌತಮಿ ಮತ್ತೆ ಒಂದಾಗೋದೇ ಇಲ್ವಾ? ಹೇಗಿತ್ತು ಈ ವಾರದ ಬಿಗ್ ಬಾಸ್ ವೀಕೆಂಡ್ ಧಮಾಕಾ..?

Vaishnavi Chandrashekar  | Published: Dec 9, 2024, 12:59 PM IST

ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟು..ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ.. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. ತಪ್ಪು ಮಾಡಿ ವಾದಿಸಿದೋರು ತಪ್ಪಾಯ್ತೆಂದು ಕೈ ಮುಗಿದ್ರು. ಟಾಸ್ಕ್ ಸಮಯದಲ್ಲಿ ಚೈತ್ರ ಕಿರುಚಾಟ ಅತಿ ಆಯ್ತಾ..? ಚೈತ್ರ ಗೆ ಫನ್ನಿ ಆಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಆಟದ ಪಾಠವನ್ನೂ ಹೇಳಿದ್ದರು. ಚರ್ಚೆ ಸಾಕೆಂದವರಿಗೆ ಸುದೀಪ್ ಕೊಟ್ಟಿದ್ದು ಮುಟ್ಟಿ ನೋಡಿಕೊಳ್ಳುವ ಮಾತಿನ ಪೆಟ್ಟು.. ವೀಕೆಂಡ್ ನಲ್ಲಿ ಕಿಚ್ಚನ ಕಟಕಟೆಯಲ್ಲಿ ಏನೆಲ್ಲಾ ನಡೀತು ನೋಡ್ಕೊಂಡ್ ಬರೋಣ ಬನ್ನಿ..

Read More...