
ನಮ್ರತಾ ಗೌಡಗೆ ಕೋಪ ತರಿಸಿದ ಮೆಸೇಜ್, 'ರಾಜಕಾರಣಿ, VIPಗಳಿಗೆ ಕಂಪನಿ ಬೇಕು, ಬರ್ತೀಯಾ' ಎಂದಿದ್ದು ಯಾರು?
‘ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ, ನಿಮ್ಮ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ...
ಪೇಯ್ಡ್ ಡೇಟಿಂಗ್..ಕುಚ್ ಕುಚ್ ಮೀಟಿಂಗ್.. ನಮೃತಾ ನಿಗಿ ನಿಗಿ! ಹಣದ ಆಸೆ ಹುಟ್ಟಿಸಿ ನಟಿಯರನ್ನ ಮಂಚಕ್ಕೆ ಕರೆದ ಕೀಚಕ ಯಾರು?
ರಾಜಕಾರಣಿ,VIPಗಳಿಗೆ ಕಂಪನಿ ಬೇಕು.. ಬರ್ತೀಯಾ ಎಂದ ಭೂಪ..!
ನಟಿಯರಿಗೂ ರಾಜಕಾರಣಿಗಳಿಗೂ ನಂಟು.. ಬಿಸಿಬಿಸಿ ಗಾಸಿಪ್..!
ಎರಡೇ ಸಿನಿಮಾ.. ಮೋಜು ಮಸ್ತಿಯ ಜೀವನ.. ಹೇಗೆ ಸಾದ್ಯ..?
ನಮ್ರತಾಗೆ ಪೇಯ್ಡ್ ಡೇಟಿಂಗ್ ಆಫರ್ ಕೊಟ್ಟ ಕೀಚಕ ಯಾರು..?
ಹಣದ ಆಸೆ ಹುಟ್ಟಿಸಿ ನಟಿಯರನ್ನ ಮಂಚಕ್ಕೆ ಕರೀದ ಭೂಪ..!
ರಾಜಕಾರಣಿ, VIPಗಳಿಗೆ ಕಂಪನಿ ಬೇಕು.. ಬರ್ತೀಯಾ ಎಂದ ಭೂಪ: ನಟಿ ನಮ್ರತಾ ಗೌಡ ಕಿಡಿಕಿಡಿ!
ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ನಮೃತಾ ಗೌಡ ತಮ್ಮ ಜೊತೆಗೆ ನಡೆದಿರೋ ಒಂದು ಶಾಕಿಂಗ್ ಸಂಗತಿಯನ್ನ ಹಂಚಿಕೊಂಡಿದ್ದಾರೆ. ರಾಜಕಾರಣಿಗಳು, VIPಗಳ ಜೊತೆಗೆ ಪೇಯ್ಡ್ ಡೇಟಿಂಗ್ಗೆ ಬರ್ತೀಯಾ ಅಂತ ಸೋಷಿಯಲ್ ಮಿಡಿಯಾದಲ್ಲಿ ಆಸಾಮಿಯೊಬ್ಬ ನಮೃತಾಗೆ ಆಫರ್ ಕೊಟ್ಟಿದ್ದಾನೆ. ಅಷ್ಟಕ್ಕೂ ನಮೃತಾಗೆ ಇಂಥಾ ಅಸಭ್ಯ ಮೆಸೇಜ್ ಮಾಡಿದ್ದು ಯಾರು..? ಚಿತ್ರರಂಗದಲ್ಲಿ ನಿಜಕ್ಕೂ ಇಂಥದ್ದೊಂದು ದಂಧೆ ನಡೀತಾ ಇದೆಯಾ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಹೌದು, ಕಿರುತೆರೆಯಲ್ಲಿ ನಾಗಿಣಿ ಪಾತ್ರ ಮಾಡಿ ಫೇಮಸ್ ಆಗಿದ್ದ, ಬಿಗ್ ಬಾಸ್ನಲ್ಲಿ ಮಿಂಚಿದ್ದ ನಮೃತಾ ಗೌಡಗೆ ಒಂದು ಕಸಿವಿಸಿಯ ಅನುಭವ ಆಗಿದೆ. ಸಾಮಾನ್ಯವಾಗಿ ಸೋಷಿಯಲ್ ಮಿಡಿಯಾದಲ್ಲಿ ನಟಿಯರಿಗೆ ಕಿರಾತಕರು ಕಾಟ ಕೊಡೋದು ಹೊಸತೇನಲ್ಲ. ಆದ್ರೆ ನಮೃತಾಗೆ ಸೋಷಿಯಲ್ ಮಿಡಿಯಾದಲ್ಲಿ ಆಗಿರೋದೇ ಬೇರೆಯದ್ದೇ ಅನುಭವ. ರೋಶನ್ ಅನ್ನೋ ವ್ಯಕ್ತಿಯೊಬ್ಬ ನಮೃತಾಗೆ ಭರ್ಜರಿ ಆಫರ್ ಕೊಟ್ಟಿದ್ದಾನೆ. ಈ ಆಫರ್ಗೆ ಒಪ್ಪಿದ್ರೆ ಕೈ ತುಂಬಾ ಕಾಸು ಕೊಡ್ತಿನಿ ಅಂದಿದ್ದಾನೆ.
ರೋಷನ್ ನ ಅಕೌಂಟ್ನಲ್ಲಿ ಸಾಕಷ್ಟು ರಾಜಕಾರಣಿಗಳ ಜೊತೆಗೆ ಈತ ಇರುವ ಫೋಟೋಸ್ ಇವೆ. ನನಗೆ ತುಂಬಾ ರಾಜಕಾರಣಿಗಳು, ವಿಐಪಿಗಳ ಪರಿಚಯ ಇದೆ. ಅವರ ಜೊತೆಗೆ ಡೇಟಿಂಗ್ ಬಂದ್ರೆ ಕೈ ತುಂಬಾ ಹಣ ಕೊಡ್ತಿನಿ ಅಂತ ಓಪನ್ ಆಗಿ ನಟಿಗೆ ಆಫರ್ ಕೊ ಟ್ಟಿದ್ದಾನೆ ಈ ಭೂಪ. ಸದ್ಯ ಈ ಮೆಸೇಜ್ನ ಸ್ಕ್ರೀನ್ ಶಾಟ್ ತೆಗೆದು ಆತನಿಗೆ ಇಲ್ಲಿಗೆ ನಿಲ್ಲಿಸು ಅಂತ ವಾರ್ನ್ ಮಾಡಿದ್ದಾರೆ ನಮೃತಾ.
ಪೇಯ್ಡ್ ಡೇಟಿಂಗ್ ಆಫರ್ :
‘ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ, ನಿಮ್ಮ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ’
ಅಂದಹಾಗೆ, ಹೌದು ಇಂಥದ್ದೊಂದು ಆಫರ್ನ ಖುಲ್ಲಂ ಖುಲ್ಲಾ ಕೊಟ್ಟಿದ್ದಾನೆ ಈ ಭೂಪ. ಅಸಲಿಗೆ ನಮೃತಾ ಗೌಡ ವೈಯಕ್ತಿಕ ಬದುಕಿನಲ್ಲಿ ನಾನಾ ಕಷ್ಟಗಳನ್ನ ಕಂಡು ಮೇಲೆ ಬಂದವರು. ಒಂದೊದೇ ಧಾರಾವಾಹಿಗಳಲ್ಲಿ ನಟಿಸ್ತಾ, ಹಣ, ಕೀರ್ತಿ ಸಂಪಾದಿಸಿದವರು.
ಬಿಗ್ ಬಾಸ್ ಸೀಸನ್ -10 ನಲ್ಲಿ ಮಿಂಚಿದ್ದ ನಮೃತಾ ಕನ್ನಡಿಗರ ಮನಸು ಗೆದ್ದಿದ್ರು. ಸದ್ಯ ನಮೃತಾ ತನ್ನದೇ ಯುಟ್ಯೂಬ್ ಚಾನೆಲ್ ಮಾಡಿಕೊಂಡು ಒಂದಿಷ್ಟು ವ್ಲಾಗ್ಸ್ ಮಾಡ್ತಾ ಇದ್ದಾರೆ. ನಮೃತಾ ಎಷ್ಟು ಬ್ಯೂಟಿಫುಲ್ಲೋ ಅಷ್ಟೇ ಬೋಲ್ಡ್ ಕೂಡ. ಬಿಂದಾಸ್ ಆದ, ಫೋಟೋ , ವಿಡಿಯೋಸ್ ಶೇರ್ ಮಾಡ್ತಾ ಇರ್ತಾರೆ.
ಆದ್ರೆ ಇಂಥದ್ದೊಂದಿಷ್ಟು ಪೋಸ್ಟ್ ಹಾಕಿದ ಕೂಡಲೇ ಇಂಥವರು ಎಂಥಾ ಕೆಲಸಕ್ಕೂ ಬರ್ತಾರೆ ಅಂತ ಭಾವಿಸೋ ಜನರಿದ್ದಾರೆ. ಅಂಥವರೇ ನಮೃತಾಗೆ ಇಂಥಾ ಆಫರ್ ಕೊಟ್ಟಿರೋದು. ಆದ್ರೆ ಹಾಗೆ ಆಫರ್ ಕೊಟ್ಟವನ ಮೆಸೇಜ್ನ ಸ್ಟೇಟಸ್ಗೆ ಹಾಕಿ ಪಾಠ ಕಲಿಸಿದ್ದಾರೆ ನಮೃತಾ.
ನಟಿಯರಿಗೂ ರಾಜಕಾರಣಿಗಳಿಗೂ ನಂಟು.. ಬಿಸಿಬಿಸಿ ಗಾಸಿಪ್..! ಎರಡೇ ಸಿನಿಮಾ.. ಮೋಜು ಮಸ್ತಿಯ ಜೀವನ.. ಹೇಗೆ ಸಾದ್ಯ..?
ಅಸಲಿಗೆ ಈ ರೋಷನ್ ನಂಥವರು ಇಂಥದ್ದೊಂದು ದಂಧೆಯನ್ನೇ ಮಾಡಿಕೊಂಡು ಬಂದಿದ್ದಾರೆ ಅನ್ನೋದು ಗುಟ್ಟಿನ ವಿಷ್ಯ ಏನೂ ಅಲ್ಲ. ಅನೇಕ ನಟಿಯರಿಗೂ ರಾಜಕಾರಣಿಗಳಿಗೂ ನಂಟು ಇರುವ ನೂರೆಂಟು ಗಾಸಿಪ್ ಇಂಡಸ್ಟ್ರಿಯಲ್ಲಿವೆ. ಕೆಲವು ನಟಿಯರು ಎರಡೇ ಎರಡು ಸಿನಿಮಾ ಮಾಡಿ ಶೋಕಿ ಜೀವನ ಮಾಡೋದನ್ನ ನೋಡಿದ್ರೆ ಎಂಥವರಿಗೂ ಅಚ್ಚರಿಯಾಗುತ್ತೆ. ಅವರಿಗೆಲ್ಲಾ ಇಂಥಾ ದಂಧೆಯಿಂದಲೇ ಹಣ ಬರುತ್ತಾ,, ಗೊತ್ತಿಲ್ಲ..
ಆದ್ರೆ ನಮೃತಾ ಕೇಸ್ನಿಂದ ಇಂಥದ್ದೊಂದು ದಂಧೆ ಈಗಲೂ ಌಕ್ಟಿವ್ ಆಗಿದೆ. ಹಲವು ಮಧ್ಯವರ್ತಿಗಳು ನಟಿಯರನ್ನ ಇಂಥಾ ಜಾಲಕ್ಕೆ ಸೆಳೆಯೋದಕ್ಕೆ ಜಾಲತಾಣಗಳನ್ನ ಬಳಸ್ತಾ ಇದ್ದಾರೆ ಅನ್ನೋದಂತೂ ಬಟಾಬಯಲಾಗಿದೆ...!
ಕೊನೇ ಮಾತು:
ಇಲ್ನೋಡಿ.. ಈಗ ಸದ್ಯ 'ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ, ನಿಮ್ಮ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ’
ಎಂಬ ಮೆಸೇಜ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿವೆ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..