Asianet Suvarna News Asianet Suvarna News

Jothe Jotheyali ಕಿರಿಕ್; ಕಿರುತೆರೆಯಿಂದ ಕಿಕ್ ಔಟ್ ಆದ ಅನಿರುದ್ಧ್ ಈಗ ಏನ್ಮಾಡ್ತಿದ್ದಾರೆ?

ಕಿರುತೆರೆಯಿಂದ್ ಕಿಕ್ ಔಟ್ ಆಗಿ ಧಾರಾವಾಹಿಯಿಂದ ದೂರ ಉಳಿದಿರುವ ನಟ ಅನಿರುದ್ಧ ಸದ್ಯ ಮುಂದಿನ ನಿರ್ಧಾರ ಏನು ಎನ್ನುವ ಕುತೂಹಲ ಮೂಡಿಸಿದೆ. ಆದರೆ ಅನಿರುದ್ಧ ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ.

First Published Aug 31, 2022, 1:41 PM IST | Last Updated Aug 31, 2022, 1:41 PM IST

ನಟ ಅನಿರುದ್ಧ್ ಕಿರುತೆರೆಗೆ ಎಂಟ್ರಿ ಕೊಟ್ಟ ಬಳಿಕ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಜೊತೆ ಜೊತೆಯಲಿ ಧಾರಾವಾಹಿ ಅನಿರುದ್ಧ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟಿತ್ತು. ಸಿನಿಮಾರಂಗದಲ್ಲಿ ಕಾಣದ ಸಕ್ಸಸ್ ಅನಿರುದ್ಧ್‌ಗೆ ಕಿರುತೆರೆ ತಂದುಕೊಟ್ಟಿತ್ತು. ಆದರೆ ಇತ್ತೀಚಿಗೆ ಜೊತೆ ಜೊತೆಯಲಿ ತಂಡದ ಜೊತೆ ಕಿರಿಕ್ ಮಾಡಿಕೊಂಡ ಕಾರಣ ಧಾರಾವಾಯಿಂದ ಮಾತ್ರವಲ್ಲದೇ ಕಿರುತೆರೆಯಿಂದನೇ ಕಿಕ್ ಔಟ್ ಆಗಿದ್ದಾರೆ. ಅನಿರುದ್ಧ ಸದ್ಯ ಧಾರಾವಾಹಿಯಿಂದ ದೂರ ಉಳಿಯುವಂತಾಗಿದೆ. ಅನಿರುದ್ಧ್ ಮುಂದಿನ ನಿರ್ಧಾರ ಏನು ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಅನಿರುದ್ಧ ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಹೌದು, ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಧಾರಾವಾಹಿಯಿಂದ ಹೊರ ಬಿದ್ದಿರುವ ಅನಿರುದ್ಧ ಮತ್ತೆ ಸಿನಿಮಾ ಕಡೆ ಮುಖಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೆ ದೊಡ್ಡ ಪರದೆ ಮೇಲೆ ಮಿಂಚುತ್ತಾರಾ ಎಂದು ಕಾದುನೋಡಬೇಕಿದೆ.