ನಟಿ ನಿರೂಷಾ ಮುದ್ದಿನ ನಾಯಿ ವಾಪಾಸ್; ಮನೆ ಬಳಿ ಬಿಟ್ಟು ಹೋದ ಕಳ್ಳರು

ನಾಪತ್ತೆಯಾಗಿದ್ದ ನಟಿ ನಿರೂಷಾ ಮುದ್ದಿನ ನಾಯಿ ವಾಪಾಸ್ ಆಗಿದೆ. ನಾಯಿ ಕಳ್ಳತನವಾಗಿದೆ ಎಂದು ವೈರಲ್ ಆಗುತ್ತಿದ್ದಂತೆ ಕಳ್ಳರು ನಾಯಿಯನ್ನು ನಿರೂಷಾ ಮನೆಯ ಬಳಿತಂದು ಬಿಟ್ಟು ಹೋಗಿದ್ದಾರೆ. ನಿರೂಷಾ ಮನೆಯ ಪಕ್ಕದಲ್ಲಿರುವ ಗಣೇಶ ಟೆಂಪಲ್ ಬಳಿ ನಾಯಿಯನ್ನು ಬಿಟ್ಟು ಅವರ ತಾಯಿಗೆ ಕರೆ ಮಾಡಿ ಹೇಳಿದ್ದರು. 

Share this Video
  • FB
  • Linkdin
  • Whatsapp

ನಟಿ ಮತ್ತು ಮಾಡೆಲ್ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರ ನೆಚ್ಚಿನ ನಾಯಿ ಕಳವಾಗಿತ್ತು. ಸುಂಕದಕಟ್ಟೆಯ ಟೆಲಿಕಾಂ ಲೇಔಟ್ ನಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ನಿರೂಷಾ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಮನೆ ಮುಂದೆ ಆಟವಾಡುವ ವೇಳೆ ಕಿರಾತಕರು ಕದ್ದೊಯ್ದಿದ್ದರು. ಆದರೀಗ ನಿರೂಷಾ ಮುದ್ದಿನ ನಾಯಿ ವಾಪಾಸ್ ಆಗಿದೆ. ನಾಯಿ ಕಳ್ಳತನವಾಗಿದೆ ಎಂದು ವೈರಲ್ ಆಗುತ್ತಿದ್ದಂತೆ ಕಳ್ಳರು ನಾಯಿಯನ್ನು ನಿರೂಷಾ ಮನೆಯ ಬಳಿತಂದು ಬಿಟ್ಟು ಹೋಗಿದ್ದಾರೆ. ನಿರೂಷಾ ಮನೆಯ ಪಕ್ಕದಲ್ಲಿರುವ ಗಣೇಶ ಟೆಂಪಲ್ ಬಳಿ ನಾಯಿಯನ್ನು ಬಿಟ್ಟು ಅವರ ತಾಯಿಗೆ ಕರೆ ಮಾಡಿ ಹೇಳಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ ತಿಳಿಸಿದ್ದರು. ನೆಚ್ಚಿನ ನಾಯಿ ಟ್ವಿಂಕಲ್ ಮನೆಗೆ ವಾಪಾಸ್ ಆದ ಬಗ್ಗೆ ನಟಿ ನಿರೂಷಾ ವಿಡಿಯೋ ಮೂಲಕ ತಿಳಿಸಿದ್ದಾರೆ. ಮುದ್ದಿನ ನಾಯಿ ಮನೆಗೆ ಬಂದ ಖುಷಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ನಟಿ ನಿರೂಷಾ ಸಂಪರ್ಕ ಸಂಬಂಧ, ಸೀತೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. 

Related Video