ಆಧುನಿಕತೆಯಿಂದ ದೂರವಿರುವ ರಹಸ್ಯ ಗ್ರಾಮ, 200 ವರ್ಷ ಹಿಂದಿನ ಬದುಕು!
ಆಧುನಿಕತೆಯಿಂದ ದೂರವಿರುವ ಕೂರ್ಮಗ್ರಾಮವು 200 ವರ್ಷಗಳ ಹಿಂದಿನ ಸನಾತನ ಪದ್ಧತಿಯಲ್ಲಿ ಜೀವನ ನಡೆಸುತ್ತಿದೆ. ವಾಹನಗಳಿಲ್ಲ, ಆಧುನಿಕ ಬಟ್ಟೆಗಳಿಲ್ಲ, ಆದರೆ ನೆಮ್ಮದಿಯ ಬದುಕು ಮತ್ತು ಅಪರಾಧಗಳಿಲ್ಲದ ಸಮಾಜವಿದೆ.
ಕರೆಂಟ್, ಬೈಕ್, ಮೊಬೈಲ್, ಟಿವಿ, ಇವು ಯಾವುದು ಇಲ್ಲದ ಬದುಕು ಹೇಗಿರುತ್ತೆ ಗೊತ್ತಾ? ಐಷಾರಾಮಿ ಜೀವನವಿಲ್ಲ. ಆಧುನಿಕತೆ ಇಲ್ಲಿಲ್ಲ. 200 ವರ್ಷಗಳ ಹಿಂದಿನ ಬದುಕು ಅವರದ್ದು! ಕಾಡಿನ ಮಧ್ಯೆ ಒಂದು ರಹಸ್ಯ ಗ್ರಾಮ. ಅಲ್ಲಿ ಸನಾತನ ಜೀವನ! ಈ ಆಧುನಿಕ ಯುಗದಲ್ಲೂ ಅದು 200 ವರ್ಷಗಳ ಹಳೇ ಪದ್ಧತಿಯಲ್ಲಿ ಜೀವನ ನಡೆಸುತ್ತಿರುವ ಗ್ರಾಮ. ಆ ಗ್ರಾಮದಲ್ಲಿ ಒಂದೇ ಒಂದು ವಾಹನವಿಲ್ಲ. ಆ ಊರಿನ ಜನ ನಮ್ಮ ನಿಮ್ಮಂತೆ ಜೀನ್ಸ್ ಬಟ್ಟೆ ಧರಿಸೋದಿಲ್ಲ. ಆ ಗ್ರಾಮವನ್ನು ವೇದಿಕ್ ಗ್ರಾಮ ಎಂದೇ ಕರೆಯುತ್ತಾರೆ.
ಹಳ್ಳಿಯಿಂದ ದಿಲ್ಲಿವರೆಗೆ ಮಂಡ್ಯ ಹೈದನ ರೋಚಕ ಚರಿತ್ರೆ! ಸಂಧ್ಯಾಕಾಲದಲ್ಲಿ ಬಿಜೆಪಿ ಸೇರಿದ್ದೇಕೆ?
ಯಾವುದೇ ಆಧುನಿಕತೆಗೆ ಅಂಟಿಕೊಳ್ಳದೆ ಪುರಾತನ ಮತ್ತು ಸನಾತನ ಪದ್ಧತಿಯಲ್ಲಿ ಕೂರ್ಮಗ್ರಾಮದ ಜನ ಬದುಕುತ್ತಿದ್ದಾರೆ ನಿಜ. ಆದ್ರೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಹೇಗೆ? ಬದುಕಿನ ಶಿಕ್ಷಣವನ್ನು ಅವರು ಕಲಿಯೋದು ಹೇಗೆ ? ಈ ಆಧುನಿಕತೆಯಲ್ಲೂ ಎಲ್ಲವನ್ನು ತೊರೆದು ಬದುಕುವುದು ಸುಲಭದ ಮಾತಲ್ಲ. ಆ ಸಾಧನೆಯನ್ನು ಕೂರ್ಮಗ್ರಾಮಸ್ಥರು ಮಾಡಿದ್ದಾರೆ. ಆ ಕಾರಣಕ್ಕಾಗಿಯೇ ಅವರು ನೆಮ್ಮದಿಯ ಬದುಕಿನಲ್ಲಿ ಜೀವಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಚಿಕ್ಕ ಕ್ರೈಂ ನಡೆದಿಲ್ಲವಂತೆ.
ಎ.ಆರ್. ರೆಹಮಾನ್‌ರನ್ನ ಅವಮಾನಿಸಿದ್ರಾ ನಟ ಸೂರ್ಯ? ಇದೇ ಕಾರಣಕ್ಕೆ ಸಿನೆಮಾ ತೊರೆದ್ರಾ ಎಆರ್‌ಆರ್
ಈ ಕೂರ್ಮಗ್ರಾಮ ನಿವಾಸಿಗಳು ಅದೆಷ್ಟು ಸುಖದಿಂದ ಬದುಕುತ್ತಿದ್ದಾರೆ ಗೊತ್ತಾ? ಇಲ್ಲಿ ಮೇಲು-ಕೀಳು ಅನ್ನೋದಿಲ್ಲ. ಎಲ್ಲರಿಗೂ ಒಂದೇ ಸ್ಥಾನಮಾನ. ಕೂತು ತಿನ್ನುವವರು ಯಾರೂ ಇಲ್ಲ. ಖುಷಿಯಿಂದ ದುಡಿಯುತ್ತಾರೆ ಗುಣಮಟ್ಟದ ಆಹಾರ ಸೇವಿಸುತ್ತಾರೆ.
ಈ ಕೂರ್ಮಗ್ರಾಮಸ್ಥರ ಬದುಕು, ಅವರ ಜೀವನ ಶೈಲಿ ನೋಡುತ್ತಿದ್ದರೆ ಪುರಾತನ ಭಾರತದ ನೆನಪು ಮಾಡಲಾರಂಭಿಸುತ್ತೆ. ಈ ಗ್ರಾಮದ ಮೇಲೆ ಯಾವ ಕೆಟ್ಟ ಕಣ್ಣು ಬೀಳದಿರಲಿ. ಗ್ರಾಮಸ್ಥರು ಎಂದೆಂದೂ ಸುಖಿಗಳಾಗಿಯೇ ಬದುಕುಲಿ.