ಟೋಕಿಯೋ 2020: ಶತಮಾನದ ಚಿನ್ನ ಗೆದ್ದು, ಭಾರತೀಯರ ಹೃದಯವನ್ನೂ ಗೆದ್ದ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಜಾವಲಿನ್ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಂಡರು. ನೀರಜ್ ಚಿನ್ನ ಗೆಲ್ಲುತ್ತಿದ್ದಂತೆಯೇ ಶತಕೋಟಿ ಭಾರತೀಯರು ಸಂಭ್ರಮಿಸಿದ್ದಾರೆ. ಇದರ ಜತೆ ರಾಷ್ಟ್ರಧ್ವಜಕ್ಕೆ ನೀರಜ್ ನೀಡಿದ ಗೌರವ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಟೋಕಿಯೋ(ಆ.07) ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಶತಮಾನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಒಂದು ಶತಮಾನದ ಬಳಿಕ ಭಾರತಕ್ಕೆ ಪದಕ ಗೆದ್ದುಕೊಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದಾರೆ.
ನೀರಜ್ ಚೋಪ್ರಾ ಜಾವಲಿನ್ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಂಡರು. ನೀರಜ್ ಚಿನ್ನ ಗೆಲ್ಲುತ್ತಿದ್ದಂತೆಯೇ ಶತಕೋಟಿ ಭಾರತೀಯರು ಸಂಭ್ರಮಿಸಿದ್ದಾರೆ. ಇದರ ಜತೆ ರಾಷ್ಟ್ರಧ್ವಜಕ್ಕೆ ನೀರಜ್ ನೀಡಿದ ಗೌರವ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ನೀರಜ್ ಚೋಪ್ರಾ ದೇಶದ ಬಂಗಾರ.. ಭಾರತೀಯರ ಹರ್ಷೋದ್ಗಾರ
ಗೆದ್ದ ಖುಷಿಯಲ್ಲಿ ನೀರಜ್ ಚೋಪ್ರಾ ತ್ರಿವರ್ಣ ಧ್ವಜವನ್ನು ಸರಿಯಾಗಿ ಹಿಡಿದುಕೊಂಡು ಟ್ರ್ಯಾಕ್‌ನಲ್ಲಿ ಓಡಿದ ರೀತಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ ನೀರಜ್ ಚಿನ್ನ ಗೆದ್ದು, ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಹೀಗಿತ್ತು ನೋಡಿ ಪದಕ ಗೆದ್ದ ಸಂಭ್ರಮ.