Asianet Suvarna News Asianet Suvarna News

2024ರ ಪ್ಯಾರಿಸ್ ಒಲಿಂಪಿಕ್ಸ್‌ ಎದುರು ನೋಡುತ್ತಿದ್ದೇನೆ: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಸಿಂಧು ಮಾತು

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಪಿ.ವಿ. ಸಿಂಧು

* ಸತತ ಎರಡು ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಸಿಂಧು

* ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಸಿಂಧು ಎಕ್ಸ್‌ಕ್ಲೂಸಿವ್‌ ಮಾತು.

ತಿರುವನಂತಪುರಂ(ಆ.04): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕಂಚಿನ ಪದಕ ಗೆಲ್ಲುವ ಮೂಲಕ ಸತತ ಎರಡು ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟುವ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ಪದಕ ಗೆದ್ದ ಬೆನ್ನಲ್ಲೇ ತವರಿಗೆ ಮರಳಿರುವ ಪಿ.ವಿ. ಸಿಂಧು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಬ್ಯಾಡ್ಮಿಂಟನ್‌ ತಾರೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ್ದಾರೆ. ಸತತ ಎರಡು ಒಲಿಂಪಿಕ್ಸ್‌ ಪದಕ ಗೆಲ್ಲುವುದು ಅಷ್ಟೊಂದು ಸುಲಭವಲ್ಲ, ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿರುವುದಾಗಿ ಸಿಂಧು ತಿಳಿಸಿದ್ದಾರೆ.

ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌!

ಭಾರತದಲ್ಲಿ ಕ್ರೀಡೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ. ಇನ್ನು ಕೋವಿಡ್‌ ಕೂಡಾ ಆದಷ್ಟು ಬೇಗ ಸಹಜ ಸ್ಥಿತಿಗೆ ಬರುವ ವಿಶ್ವಾಸವಿದೆ ಎಂದು ಸಿಂಧು ಅಭಿಪ್ರಾಯಪಟ್ಟಿದ್ದಾರೆ. ಸಿಂಧು ಎಕ್ಸ್‌ಕ್ಲೂಸಿವ್ ಸಂದರ್ಶನದ ಕಂಪ್ಲೀಟ್‌ ವಿಡಿಯೋ ಇಲ್ಲಿದೆ ನೋಡಿ.
 

Video Top Stories