Asianet Suvarna News Asianet Suvarna News

ನೂತನ ಸೆಮಿಕಂಡಕ್ಟರ್‌ ಲ್ಯಾಬ್‌ ಉದ್ಘಾಟಿಸಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಗುರುವಾರ ಬೆಂಗಳೂರಿನಲ್ಲಿ ನೂತನ ಸೆಮಿ ಕಂಡಕ್ಟರ್‌ ಲ್ಯಾಬ್‌ ಅನ್ನು ಅನಾವರಣ ಮಾಡಿದರು. ಸಿಲಿಕಾನ್‌ ಇನೋವೇಷನ್‌ ಸೆಮಿ ಕಂಡಕ್ಟರ್‌ ಹೆಸರಿನ ಲ್ಯಾಬ್‌ಅನ್ನು ಉದ್ಘಾಟನೆ ಮಾಡಿದ್ದಾರೆ.

ಬೆಂಗಳೂರು (ಜ.19): ಡಿಜಿಟಲ್‌ ಇಂಡಿಯಾ ಆಶಯದ ಅಡಿಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಗುರುವಾರ ಬೆಂಗಳೂರಿನಲ್ಲಿ ನೂತನ ಸೆಮಿ ಕಂಡಕ್ಟರ್‌ ಲ್ಯಾಬ್‌ಅನ್ನು ಅನಾವರಣ ಮಾಡಿದರು. ಆ ಬಳಿಕ ಡಿಜಿಟಲ್‌ ಇಂಡಿಯಾ ಹಾಗೂ ದೂರದೃಷ್ಟಿಯ ವಿಚಾರಗಳ ಬಗ್ಗೆ ವಿವಿಧ ಕಂಪನಿಗಳೊಂದಿಗೆ ಮಾತನಾಡಿದರು.

ಸ್ಮಶಾನ ಕಾರ್ಮಿಕರ ಜತೆ ಬ್ರೇಕ್‌ಫಾಸ್ಟ್‌ ಸವಿದ ಸಿಎಂ: ರಾಜೀವ್ ಚಂದ್ರಶೇಖರ್ ಕಾರ್ಯಕ್ರಮ ನೆನಪಿಸಿಕೊಂಡ ಬೊಮ್ಮಾಯಿ

ಅದರೊಂದಿಗೆ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಎನ್‌ಎಕ್ಸ್‌ಪಿ ವಿನ್ಯಾಸದ ತಂಡದೊಂದಿಗೆ ರಾಜೀವ್‌ ಚಂದ್ರಶೇಖರ್‌ ಸಂವಾದ ನಡೆಸಿದರು. ಇಕೋ ಸಿಸ್ಟಮ್‌ ಅಭಿವೃದ್ಧಿ ಪಡಿಸುವ ಬಗ್ಗೆ ಈ ವೇಳೆ ಚರ್ಚೆ ನಡೆಸಲಾಯಿತು. ಈ ವೇಳೆ ಸಿಲಿಕಾನ್‌ ಇನೋವೇಷನ್‌ ಸೆಮಿ ಕಂಡಕ್ಟರ್‌ ಹೆಸರಿನ ಲ್ಯಾಬ್‌ನ ವೀಕ್ಷಣೆಯನ್ನೂ ಮಾಡಿದರು.

Video Top Stories